ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಸಂವಿಧಾನ

17 SIRWAR 01
ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು. ಸಿದ್ಧಬಸವ ಕಬೀರ ಸ್ವಾಮೀಜಿ, ಜಾಗೀರ ಜಾಡಲದಿನ್ನಿಯ ವೀರಭದ್ರಯ್ಯ ಸ್ವಾಮೀಜಿ, ಸಚಿವ ಎನ್.ಎಸ್.ಬೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ ಇತರರಿದ್ದರು.
Published on

ಸಿರವಾರ: ತಾಲೂಕಿನ ಮಲ್ಲಟ ಗ್ರಾಮದಲ್ಲಿ ಎಂ.ಆರ್.ಎಚ್.ಎಸ್ ಹಾಗೂ ಡಾ.ಎನ್.ಮೂರ್ತಿ ಬಣ (ದಸಂಸ) ಸಹಯೋಗದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಸಿದ್ಧಬಸವ ಕಬೀರ ಸ್ವಾಮೀಜಿ ಮಾತನಾಡಿ, ದೇಶದ ಭವಿಷ್ಯವನ್ನು ಬದಲಾವಣೆ ಮಾಡಿದ್ದು ಡಾ.ಬಿ.ಆರ್. ಅಂಬೇಡ್ಕರ್. ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಇಂದು ದೇಶ ದೊಡ್ಡ ಪ್ರಮಾಣದಲ್ಲಿ ಬದಲಾವಣೆ, ಅಭಿವೃದ್ಧಿ ಹೊಂದುತ್ತಿದೆ ಎಂದರೆ ಅದಕ್ಕೆ ಮೂಲ ಶಿಕ್ಷಣ. ದೇಶದಲ್ಲಿ ಅನಕ್ಷರತೆ ನಿರ್ಮೂಲನೆ, ಬಡತನ ನಿವಾರಣೆ, ಆರ್ಥಿಕ ಸಮಾನತೆ ಮತ್ತು ಶಿಕ್ಷಣ ಸಮಾನತೆಯನ್ನು ಒದಗಿಸಲು ಸಂವಿಧಾನದಿಂದ ಮಾತ್ರ ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಗಂಗಾಧರ ನಾಯಕ, ದಲಿತ ಸಂಘಷರ್ ಸಮಿತಿ ಸ್ಥಾಪಕ ಡಾ.ಎನ್.ಮೂರ್ತಿ, ಮುಖಂಡರಾದ ಅಂಬಣ್ಣ ಅರೋಲಿಕರ್, ಎಂ.ಆರ್.ಎಚ್.ಎಸ್.ಜಿಲ್ಲಾಧ್ಯಕ್ಷ ಜೆ.ಅಬ್ರಹಾಂ ಹೊನ್ನಟಗಿ ಮಾತನಾಡಿದರು.

ಜಾಗೀರ ಜಾಡಲದಿನ್ನಿಯ ವೀರಭದ್ರಯ್ಯ ಸ್ವಾಮೀಜಿ, ಮಲ್ಲಟ ಗ್ರಾಪಂ ಅಧ್ಯಕ್ಷ ಹನುಮಂತ ನಾಯಕ, ಸಿರವಾರ ಪಪಂ ಅಧ್ಯಕ್ಷ ವೈ.ಭೂಪನಗೌಡ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ ಕವಿತಾಳ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ವಾಲ್ಮೀಕಿ, ತಹಸೀಲ್ದಾರ್ ರವಿ.ಎಸ್.ಅಂಗಡಿ, ತಾಪಂ ಇಒ ಶಶಿಧರಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net