ದೇಶದ ಏಕತೆ, ಸಮಗ್ರತೆಗೆ ಸಂವಿಧಾನ ಅರ್ಪಣೆ

26 SARAG 3
ಸರಗೂರು ತಾಲೂಕಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸಂವಿಧಾನ ಸಮರ್ಪನಾ ದಿನಾಚರಣೆ ಆಚರಿಸಲಾಯಿತು. ರಾಜಣ್ಣ, ರಾಧಿಕಾ, ಶಿವಶಂಕರ್, ಮಹೇಶ್, ಮಹೇಂದ್ರ ಇತರರು ಇದ್ದರು.
Published on

ಸರಗೂರು: ದೇಶದ ಏಕತೆ ಮತ್ತು ಸಮಗ್ರತೆಗಾಗಿ ರಾಷಟ್ರೆಕ್ಕೆ ಸಂವಿಧಾನ ಅರ್ಪಣೆಗೊಂಡಿದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಲಭಿಸಿದೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಸಂವಿಧಾನ ಪೀಠಿಕೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿ, ಯುವ ಸಮುದಾಯ ಭಾರತದ ಮೂಲ ಪೀಠಿಕೆಯನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ಆಶಿಸಿದರು.

ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ದೇಶದಲ್ಲಿ ಕೋಮು ಭಾವನೆ, ಪ್ರಜಾಪ್ರಭುತ್ವದ ಅಣಕ, ಸಂವಿಧಾನ ವಿರೋಧಿ ಹೇಳಿಕೆಗಳು ಬರುತ್ತಿವೆ. ಇಂತಹ ಹೇಳಿಕೆ ನೀಡುವವರನ್ನು ಕಾನೂನು ರೀತಿಯಲ್ಲಿ ಶಿಕ್ಷಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂವಿಧಾನ ಉಳಿವಿಗಾಗಿ ಭಾರಿ ಹೋರಾಟಗಳೇ ಆರಂಭವಾಗಿ ಇಡೀ ದೇಶ ಕತ್ತಲಕೂಪಕ್ಕೆ ತಳ್ಳಲ್ಪಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಪಪಂ ಸದಸ್ಯರಾದ ಉಮಾ ರಾಮಚಂದ್ರ, ಚೆಲುವ, ಕೃಷ್ಣ, ಚೈತ್ರಾ ಸ್ವಾಮಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಮುಖಂಡರಾದ ಪುಟ್ಟ ಹನುಮಯ್ಯ, ಕರ್ನಾಟಕ ಭೀಮಾ ಸೇನೆ ತಾಲೂಕು ಅಧ್ಯಕ್ಷ ಮಹೇಂದ್ರ, ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ಆರೋಗ್ಯ ಇಲಾಖೆ ಆಡಳಿತಾಧಿಕಾರಿ ಪಾರ್ಥಸಾರಥಿ, ಉಪತಹಸೀಲ್ದಾರ್ ಸುನೀಲ್, ಕಬಿನಿ ನೀರಾವರಿ ಇಲಾಖೆ ಎಇಇ ಕೆ.ಉಷಾ, ಗೋವಿಂದರಾಜು, ಮಹದೇವಸ್ವಾಮಿ, ಸಣ್ಣಸ್ವಾಮಿ, ರವೀಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net