ಸಂವಿಧಾನ ಕಲ್ಪಿಸಿದೆ ಶಾಂತಿಯ ಬದುಕು

HEBBARA
Published on

ಮುಂಡಗೋಡ: ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ ನಾವೆಲ್ಲವೂ ದೇಶದಲ್ಲಿ ಶಾಂತ ರೀತಿಯಿಂದ ಬದುಕುತ್ತಿದ್ದೇವೆ ಎಂದು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಹೇಳಿದರು.

ಪಟ್ಟಣದ ಗಾಂಧಿನಗರದ ಚಲವಾದಿ ಸಮಾಜ ಮಂದಿರ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ವೇಳೆ ಸಂವಿಧಾನ ಇಲ್ಲದಿದ್ದರೆ ಸಮಾಜದಲ್ಲಿ ಯಾವ ಯಾವ ಘಟನೆಗಳು ನಡೆಯುತ್ತಿದ್ದವು ಎಂಬುದು ತಿಳಿಯುತ್ತಿರಲಿಲ್ಲ. ಎಲ್ಲರೂ ಸಮಾನತೆಯಿಂದ ಬದುಕಬೇಕು. ಸಮಾಜದಲ್ಲಿ ಸಮಾನತೆಯನ್ನು ನಾವೆಲ್ಲರೂ ಕಾಣಬೇಕು. ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಹತ್ತಾರು ನಾಯಕರು ಎಲ್ಲ ಸಮಾಜಕ್ಕೂ ಮೀಸಲಾದವರು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.

ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಸಮಾಜಕ್ಕೆ ಆದರ್ಶವಾದ ಕೊಡುಗೆ ನೀಡಿದವರೇ ದೇವರೆಂದು ತಿಳಿಯಬೇಕು. ಸಮಾಜಕ್ಕೆ ಕೊಡುಗೆ ನೀಡಿದ ಮಹಾತ್ಮರ ಜಯಂತಿಗಳನ್ನು ಆಚರಿಸುತ್ತೇವೆ. ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು. ಸಮಾಜ ಮಂದಿರವನ್ನು ಕಟ್ಟಿ ಕೈ ಬಿಡಬಾರದು. ಅದರ ಸದ್ಬಳಕೆ ಮಾಡಿಕೊಳ್ಳಬೇಕು.ಮಕ್ಕಳಿಗೆ ಸಮಾಜ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚು ಮಾಹಿತಿ ನೀಡಬೇಕು ಎಂದರು.

ಪಪಂ ಅಧ್ಯಕ್ಷೆ ಜಯಸುಧಾ ಭೋವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ರವಿಗೌಡ ಪಾಟೀಲ, ಜ್ಞಾನದೇವ ಗುಡಿಯಾಳ, ನಾಗಭೂಷಣ ಹಾವಣಗಿ, ಗೌಸ್ ಮಕಾನದಾರ್, ಎನ್.ಡಿ.ಕಿತ್ತೂರ,ಎನ್.ಎಂ.ದುಂಡಸಿ, ಈರಪ್ಪ ಚಲವಾದಿ, ಸುರೇಶ ಚಲವಾದಿ, ಮಲ್ಲಿಕಾಜರ್ಜುನ್ ಕಿತ್ತೂರ ಸೇರಿದಂತೆ ಸಮಾಜದ ಮುಖಂಡರುಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net