

ಮೈಸೂರು: ಸಂವಿಧಾನ ಸರ್ವಧರ್ಮೀಯರು ಸಮಾನವಾಗಿ ಬಾಳುವ ಹಕ್ಕು ನೀಡಿದೆ. ಸಂವಿಧಾನ ಅನುಸರಿಸಿ, ಎಲ್ಲರೂ ಪರಸ್ವರ ಪ್ರೀತಿ-ಗೌರವದಿಂದ ಬಾಳಬಹುದಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.
ಕರ್ನಾಟಕ ರಾಜ್ಯ ಭೀಮ್ ಸೇನೆಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಭೀಮ್ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ಸಂವಿಧಾನ ಶೋಷಿತರಿಗೆ ರಕ್ಷಾ ಕವಚದಂತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದರೂ ಇನ್ನೂ ಅಸಮಾನತೆ, ಶೋಷಣೆ, ದಬ್ಬಾಳಿಕೆ ಹೋಗಿಲ್ಲ. ಹೀಗಾಗಿ ಶೋಷಿತರನ್ನು ಸಂವಿಧಾನ ರಕ್ಷಿಸುತ್ತಿದೆ ಎಂದರು.
ನಿವೃತ್ತ ಆರ್‌ಟಿಒ ಅಧಿಕಾರಿ ಮಹಮದ್ ಇಕ್ಬಾಲ್, ಸೇನೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಸರ್ವೇಶ್, ಗೌರವಾಧ್ಯಕ್ಷ ಬಿ.ವಿ. ಶಿವಕುಮಾರ, ರಾಜ್ಯ ಉಸ್ತುವಾರಿ ಜಿ.ಎನ್.ದೇವದತ್ತ, ಯುವ ಘಟಕದ ಅಧ್ಯಕ್ಷ ಸಿ.ಮೋಹನಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷ ಎಂ.ಎಸ್.ವೈರಮುಡಿ, ಎಸ್.ಅಶೋಕ್, ಪ್ರಧಾನ ಕಾರ್ಯದರ್ಶಿ ಬಿ.ಡಿ.ಮಾದೇಶ, ಕಾರ್ಯದರ್ಶಿಗಳಾದ ಎಂ.ಅಶೋಕ, ಸದಾಕುಮಾರ್, ಖಜಾಂಚಿ ನಾಗರಾಜು, ಸಂಘಟನಾ ಕಾರ್ಯದರ್ಶಿಗಳಾದ ವಿ.ಎಂ.ಮಲ್ಲೇಶ್, ಡಿ.ರವಿಚಂದ್ರ, ನಿರ್ದೇಶಕರಾದ ಕೆ.ಸಿ.ಸಿದ್ದರಾಜು, ಬಾಲರಾಜು, ಡಿ.ಶಿವಣ್ಣ, ಜಿಲ್ಲಾಧ್ಯಕ್ಷ ಜಗದೀಶ್, ನಗರ ಜಿಲ್ಲಾಧ್ಯಕ್ಷ ಮಹಮದ್ ಶಫಿ, ನಗರಾಧ್ಯಕ್ಷ ಎಂ.ಪ್ರಭಾಕರ್, ಉಪಾಧ್ಯಕ್ಷರಾದ ಬಸವರಾಜು, ಕುಮಾರ್, ಮಹಮದ್ ಯೂನಸ್ ಇತರರು ಇದ್ದರು.
ಭೀಮ್ ರತ್ನ ಪ್ರಶಸ್ತಿ ಪುರಸ್ಕೃತರು: ಬನ್ನಂಗಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಬಿ.ನೇತ್ರಾ, ಮಹಾರಾಣಿ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಶ್ರೀನಿವಾಸ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ಪ್ರಧಾನ ವ್ಯವಸ್ಥಾಪಕಿ ಸರಸ್ವತಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ವಿ.ವೆಂಕಟರಾಜು, ಆದಿ ಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಡಿ. ವಿನೂತನ್, ಸಾಹಿತಿ ಬನ್ನೂರು ರಾಜು, ಮಾಜಿ ಸೈನಿಕರಾದ ಪ್ರಸಾದ್, ಸ್ವಾಮಿನಾಯಕ್, ಪಿ.ಮಹದೇವ, ಸಿ.ಮಂಜು, ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಜೆ.ಜಯಂತ್, ಕೆ.ಪಿ.ನಾಗರಾಜ್, ಕೆ.ದೀಪಕ್, ಎಸ್.ಟಿ.ರವಿಕುಮಾರ್, ಎಸ್.ಆರ್.ಮಧುಸೂದನ್, ಗಾಯಕ ಅಮ್ಮ ರಾಮಚಂದ್ರ, ಪಾಲಿಕೆ ಅಧೀಕ್ಷಕ ಶ್ರೀನಿವಾಸ್ ಇತರರನ್ನು ಸನ್ಮಾನಿಸಲಾಯಿತು.