ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ

The Congress government held as promised
ಬೀಳಗಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಶಾಸಕ ಜೆ.ಟಿ. ಪಾಟೀಲ ಭಾನುವಾರ ಚಾಲನೆ ನೀಡಿದರು. ತಾಪಂ ಇಒ ಸಿದ್ದು ನಕ್ಕರಗುಂದಿ, ಗ್ರೇಡ್-2 ತಹಸೀಲ್ದಾರ್ ಆನಂದ ಕೋಲಾರ, ರಾಮನಗೌಡ ಜಕ್ಕನಗೌಡರ, ಎಂ.ಎಂ. ಖಾಜಿ, ಸುರೇಂದ್ರ ನಾಯಕ ಇತರರಿದ್ದರು.
Published on

ಬೀಳಗಿ: ಚುನಾವಣೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತವಾಗಿ ಪ್ರಯಾಣಿಸಲು ಬಸ್ ವ್ಯವಸ್ಥೆ ಕಲ್ಪಿಸಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ಸುಳ್ಳು ಭರವಸೆ ನೀಡುವ ಪಕ್ಷವಲ್ಲ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿಯ ಆಶ್ರಯ ಮನೆಗಳನ್ನು ಪೂರ್ಣಗೊಳಿಸಲು ಶೀಘ್ರ ಅನುದಾನ ಮಂಜೂರಿಗೆ ಈಗಾಗಲೇ ಸಂಬಂಧಿಸಿದವರ ಜತೆಗೆ ಸಭೆ ನಡೆಸಿರುವುದಾಗಿ ತಿಳಿಸಿದರು. ಅಲ್ಲದೆ, ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೀಳಗಿ ಕೆರೆಗೆ ಕೊಳಚೆ ನೀರು ಸೇರದಂತೆ ಪ್ರತ್ಯೇಕ ಚರಂಡಿ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

ತಾಪಂ ಇಒ ಸಿದ್ದು ನಕ್ಕರಗುಂದಿ, ಗ್ರೇಡ್-2 ತಹಸೀಲ್ದಾರ್ ಆನಂದ ಕೋಲಾರ, ರಾಮನಗೌಡ ಜಕ್ಕ ನಗೌಡರ, ಎಂ.ಎಂ. ಖಾಜಿ, ಸುರೇಂದ್ರ ನಾಯಕ, ಶ್ರೀಶೈಲ ಅಂಟೀನ, ಮಹಾದೇವ ಹಾದಿಮನಿ, ಸಿದ್ದು ಸಾರಾವರಿ, ಸಂಗಪ್ಪ ಕಂದಗಲ್ಲ, ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಸೋಮನಗೌಡ ಪಾಟೀಲ, ಅನಿಲ ಗುಡೂರ, ಸಾರಿಗೆ ವ್ಯವಸ್ಥಾಪಕ ಆರ್.ಸಿ. ಖೇಡದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net