ಸಂಗೀತ ಕಾರ್ಯಕ್ರಮ ನಾಳೆ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಅಮೃತವಷಿರ್ಣಿ ಬಾನ್ಸುರಿ ಅಕಾಡೆಮಿ ವತಿಯಿಂದ ಸಂಗೀತ ಕಚೇರಿ ಹಾಗೂ ಹಿರಿಯ ಸಂಗೀತ ತಜ್ಞರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ನಗರದ ಆಲೂರು ವೆಂಕಟರಾವ ಭವನದಲ್ಲಿ ಜು. 9ರಂದು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.
ಪಂ. ಮಲ್ಲಿಕಾರ್ಜುನ ತರ್ಲಟ್ಟಿ ಸಂಗೀತ ಕಾರ್ಯಕ್ರಮ ಉದ್ಘಾಟಿಸುವರು. ಪತ್ರಕರ್ತ ಹರ್ಷವರ್ಧನ ಶೀಲವಂತ ಅತಿಥಿಯಾಗಿ ಆಗಮಿಸುವರು. ಅನನ್ಯಾ ಪಾಮಡಿ ಸುಗಮ ಸಂಗೀತ ಪ್ರಸ್ತುತಪಡಿಸುವರು. ಕಲಾವಿದ ಉಸ್ತಾದ್​ ಶೇಖ್​ ಅಬ್ದುಲ್ಲಾ ಖಾಜಿ ಹಾಗೂ ಶಿಷ್ಯ ವೃಂದದ ಪರ ಮಣಿಕಂಠ ಕುಲಕಣಿರ್, ಜಯತೀರ್ಥ ಕುಲಕಣಿರ್, ಡಾ. ರಾಮ ಕೌಲಗುಡ್ಡ, ಶರ್ವ ಕೌಲಗುಡ್ಡ, ಸಾಕೇತ ಜೋಗಳೇಕರ, ರಿತು ಗುಮಾಸ್ತೆ, ಸಂತೋಷ ಶಿರಸಂಗಿ, ಪ್ರಮೋದ ಆಚಾರ್​, ಸೌರಭ ತುರಮರಿ, ಸೃಜನ ಕುಲಕಣಿರ್, ಶ್ರೇಯಾ ಆಚಾರ್​, ವರುಣ ಗುಡಿ ಬಾನ್ಸುರಿ ಪ್ರಸ್ತುತಪಡಿಸುವರು. ರಾಜಕುಮಾರ ಮೂಡಬಿ, ಮಳೆ ಮಲ್ಲೇಶ ಹೂಗಾರ ಹಾಗೂ ದಾಮೋದರ ಪಾಮಡಿ ತಬಲಾ ಸಾಥ್​ ನೀಡಲಿದ್ದು, ಬಸವರಾಜ ಹೂಗಾರ ಸಂವಾದಿನಿ ಸಾಥ್​ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net