

ಬಸವನಬಾಗೇವಾಡಿ: ಹನ್ನೆರಡನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಅನುಭವ ಮಂಟಪ ನಿರ್ಮಿಸುವ ಮೂಲಕ ಸಂಸತ್ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿರುವ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಅಂತಾರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಸದಸ್ಯರ ಪದಗ್ರಹಣ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ಪ್ರತಿಯೊಬ್ಬ ಪ್ರಜೆ ಪ್ರಜಾಪ್ರಭುತ್ವದ ಮಹತ್ವ ತಿಳಿದುಕೊಂಡಿರಬೇಕು ಎಂದು ಹೇಳಿದರು.
ಮುಖ್ಯಶಿಕ್ಷಕಿ ಆರ್.ಎಂ.ರೋಣದ ಶಾಲೆ ಸಂಸತ್ತಿಗೆ ಆಯ್ಕೆಯಾದ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಶಾಲಾ ಸಲಹಾ ಸಮಿತಿ ಅಧ್ಯಕ್ಷ ಅನಿಲ ಅಗರವಾಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸಮಿತಿ ಸದಸ್ಯರಾದ ಲಕ್ಷ್ಮಿ ಗೊಳಸಂಗಿ, ಪ್ರಭಾವತಿ ರಾಯಗೊಂಡ, ಮೀನಾಕ್ಷಿ ಮೋದಿ, ಬೇಬಿ ಗಣಾಚಾರಿ, ಸೋಮನಾಥ ಪಾಟೀಲ, ಶೈಲಶ್ರೀ ತೇರದಾಳಮಠ, ಸುರೇಶ ಪಾಟೀಲ, ಎಂ.ಜಿ. ಆದಿಗೊಂಡ, ಸದಾನಂದ ಯಳಮೇಲಿ, ಶಿಕ್ಷಕರಾದ ಎಸ್.ಎಂ.ಬಿಸ್ಟಗೊಂಡ, ಮಂಜುಳಾ ಮುಕಾರ್ತಿಹಾಳ, ಮಹೇಶ ಹುಮನಾಬಾದ, ಮಹೇಶ ಸಂಗಮ, ವಿಜಯ ರಾಠೋಡ ಅನೇಕರು ಉಪಸ್ಥಿತರಿದ್ದರು. ಉಮೇಶ ಗೊಳಸಂಗಿ ಸ್ವಾಗತಿಸಿದರು. ಶ್ರೀದೇವಿ ಸಾಳುಂಕೆ ನಿರೂಪಿಸಿ, ವಂದಿಸಿದರು.