ಪುತ್ತೂರಿಗೆ ಬಿಜೆಪಿ ಶಾಸಕರಿಲ್ಲವೆಂಬ ಕೊರಗು ನೀಗಿತು

Published on

ಉಪ್ಪಿನಂಗಡಿ: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಭಂಡಾರಿ ಬೊಟ್ಯಾಡಿ ಜಯಗಳಿಸಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಗುರುವಾರ ಸಾಯಂಕಾಲ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಮುಕುಂದ ಗೌಡ ಬಜತ್ತೂರು ಮಾತನಾಡಿ, ಪುತ್ತೂರಿನವರೇ ಆದ ಕಿಶೋರ್ ಕುಮಾರ್ ಬೊಟ್ಯಾಡಿ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂಲಕ ಪುತ್ತೂರಿನವರಿಗೆ ಬಿಜೆಪಿ ಶಾಸಕರಿಲ್ಲ ಎಂಬ ಕೊರತೆ ನೀಗಿದ್ದಾರೆ ಎಂದರು.

ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್, ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಮೋಹನ್ ಪಕಳ, ಬಿಜೆಪಿ ಪ್ರಮುಖರಾದ ಎನ್.ಉಮೇಶ್ ಶೆಣೈ, ಜಯಂತ ಪೊರೋಳಿ, ರಾಮಚಂದ್ರ ಪೂಜಾರಿ, ಪ್ರಸಾದ್ ಭಂಡಾರಿ, ಉಷಾ ಮುಳಿಯ, ಧನಂಜಯ ಕುಮಾರ್ ನಟ್ಟಿಬೈಲು, ವಿಶ್ವನಾಥ ಶೆಟ್ಟಿ ಕಂಗ್ವೆ, ಚಂದ್ರಶೇಖರ ಮಡಿವಾಳ, ಸುಜಾತ ರೈ ಅಲಿಮಾರ್, ಹರೀಶ್ ಡಿ, ಗಂಗಾಧರ ಪಿ.ಎನ್, ಚಂದ್ರಶೇಖರ ಮಡಿವಾಳ, ರಾಜೇಶ್ ಕೊಡಂಗೆ, ಶರತ್ ಕೋಟೆ, ನೀಲಯ್ಯ ಗೌಡ, ರುಕ್ಮಿಣಿ, ರಮೇಶ್ ಸುಭಾಶ್‌ನಗರ, ಗಂಗಾಧರ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.

ಶಕ್ತಿ ಕೇಂದ್ರದ ಸಂಚಾಲಕ ಪ್ರಸಾದ್ ಭಂಡಾರಿ ಸ್ವಾಗತಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಧನಂಜಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net