ದೇವರ ಸ್ಮರಣೆಗಿಂತ ಉತ್ತಮರ ಸಂಘ ಲೇಸು

ದೇವರ ಸ್ಮರಣೆಗಿಂತ ಉತ್ತಮರ ಸಂಘ ಲೇಸು
Published on

ಗಂಡಸಿ: ಭಕ್ತಿ, ಧನಸಹಾಯ, ದಾಸೋಹ ಎಂಬ 3 ಸೇವೆಗಳನ್ನು ಆಂಜನೇಯ ಸ್ವಾಮಿಗೆ ನಿಷ್ಠೆಯಿಂದ ಅರ್ಪಿಸುವ ಮೂಲಕ ಗಂಡಸಿ ಸುತ್ತಮುತ್ತಲ ಭಾಗದ ಭಕ್ತರು ಧಾರ್ಮಿಕ ಕಾರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನುಗ್ಗೇಹಳ್ಳಿ ಪುರವರ್ಗ ಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಭಾನುವಾರ ನಡೆದ ಗಂಡಸಿ ಆಂಜನೇಯ ಸ್ವಾಮಿ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಾಲಯಗಳಲ್ಲಿ ಸ್ಮರಣೆ ಮಾಡದಿದ್ದರೂ, ಉತ್ತಮರ ಸಹವಾಸ ಮಾಡಬೇಕು. ಮನುಷ್ಯ ಭಯ ಮತ್ತು ಭಕ್ತಿಯಿಂದ ತನ್ನ ಬದುಕಿನ ಬಂಡಿ ಸಾಗಿಸಲು ದೇಗುಲಗಳನ್ನು ನಿರ್ಮಿಸಲಾಗುತ್ತದೆ. ಭೂಮಿಯ ಮೇಲಿನ ಪ್ರತಿಯೊಂದು ಕಣದಲ್ಲೂ ದೇವರ ಪ್ರತಿರೂಪವಿದ್ದು, ಮನುಷ್ಯರಾದ ನಾವು ದೇವರನ್ನು ಪೂಜಿಸಲು ನಿರ್ದಿಷ್ಟ ಸ್ಥಳ ಗುರುತಿಸಿ ದೇವಾಲಯಗಳನ್ನು ನಿರ್ಮಿಸುತ್ತೇವೆ ಎಂದರು.

ರಾತ್ರಿ 7 ಗಂಟೆಗೆ ಆಂಜನೇಯ ಸ್ವಾಮಿ ಮತ್ತು ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿ ಅವರನ್ನು ವಿದ್ಯುತ್ ದೀಪಗಳಿಂದ ಅಲಂಕೃತ ಮಂಟಪದ ಮೇಲೆ ಕುಳ್ಳಿರಿಸಿ ನಂದಿಧ್ವಜ, ಲಿಂಗದ ವೀರರ ಕುಣಿತ, ಆಂಜನೇಯ ವೇಷಧಾರಿ ಕುಣಿತ, ತಮಟೆ ವಾದ್ಯ, ಚಿಟ್ಟಿಮೇಳದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮಾಜಿ ಶಾಸಕ ಬಿ.ಶಿವರಾಂ, ದೇವಾಲಯದ ವ್ಯವಸ್ಥಾಪಕ ಬಸವರಾಜ್, ವಿರೂಪಾಕ್ಷಪ್ಪ, ಕಾಯಿ ಪ್ರಕಾಶ್, ಗಂಗಾಣಮ್ಮ, ಮೋಹನ್, ಅರ್ಚಕ ಪ್ರಕಾಶ್, ಸಂಜೀವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net