ಸಮುದಾಯ ಸಂಘಟಿಸಿದ ಬಸವಜಯ ಮೃತ್ಯುಂಜಯ ಶ್ರೀಗಳು

The community was organized by Basavajaya Mrityunjaya Sri.
ಮನೆ-ಮನದಲ್ಲಿ ಕೂಡಲಸಂಗಮ ಕಾರ್ಯಕ್ರಮದಲ್ಲಿ ಸಿಂದಗಿ ಸಿ.ಎಂ. ಮನಗೂಳಿ ಪದವಿ ಕಾಲೇಜು ಪ್ರಾಧ್ಯಾಪಕ ಅರವಿಂದ ಮನಗೂಳಿ ಮಾತನಾಡಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಕಲಬುರ್ಗಿ ಪಂಚಸೇನಾ ಅಧ್ಯಕ್ಷ ಸೋಮಶೇಖರ ಮಾಳಗಿ, ಮುಖಂಡರಾದ ಎಲ್.ಎಂ. ಪಾಟೀಲ, ಶರಣಪ್ಪ ಗಾಣಗೇರ, ಬಸವರಾಜ ಗೌಡರ, ಶೇಖರಗೌಡ ಗೌಡರ, ಗಿರೀಶಗೌಡ ಗೌಡರ ಇದ್ದರು.
Published on

ಕೂಡಲಸಂಗಮ: ಪಂಚಮಸಾಲಿ ಸಮುದಾಯವನ್ನು ಸಂಘಟಿಸಿದ ಶ್ರೇಯಸ್ಸು ಬಸವಜಯ ಮೃತ್ಯುಂಜಯ ಶ್ರೀಗಳಿಗೆ ಸಲ್ಲುವುದು. ಪಂಚಮಸಾಲಿಗಳ ಶಕ್ತಿ ಎಷ್ಟು ಎಂಬುದನ್ನು ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮಾಜ ಸಂಘಟನೆ ಕಾರ್ಯ ಮುಂದುವರಿಸಬೇಕು ಎಂದು ಸಿಂದಗಿ ಸಿ.ಎಂ. ಮನಗೂಳಿ ಪದವಿ ಕಾಲೇಜು ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.

ಸೋಮವಾರ ರಾತ್ರಿ ಲಿಂಗಾಯತ ಪಂಚಮಸಾಲಿ ಪೀಠದಿಂದ ಕೂಡಲ ಸಂಗಮದ ಶೇಖಪ್ಪ ದೇಶಿ ಅವರ ಮನೆಯಲ್ಲಿ ನಡೆದ ಮನೆ- ಮನದಲ್ಲಿ ಕೂಡಲಸಂಗಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ಪಂಚಪೀಠಗಳಲ್ಲಿ ಎರಡು ಪೀಠಗಳನ್ನು ಪಂಚಮಸಾಲಿ ಸಮುದಾಯದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸಮುದಾಯದ ಮುಖಂಡರು ಇಟ್ಟರು. ಪಂಚಪೀಠದವರು ಒಪ್ಪದ ಕಾರಣ ಪಂಚಮಸಾಲಿ ಸಮುದಾಯದಲ್ಲಿ ಕೂಡಲಸಂಗಮ, ಹರಿಹರದಲ್ಲಿ ಎರಡು ಪೀಠಗಳು ಹುಟ್ಟಿಕೊಂಡವು ಎಂದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಶ್ರಾವಣಮಾಸದ ನಿಮಿತ್ಯ ಕಳೆದ 16 ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಪ್ರತಿ ವರ್ಷ ಬಸವಾದಿ ಶರಣರ ವಚನ ಚಿಂತನೆಗಳ ಉಪನ್ಯಾಸ ಇರುತ್ತಿತ್ತು. ಈ ವರ್ಷ ಪಂಚಮಸಾಲಿ ಮಹಾನ್ ನಾಯಕರ ಪರಿಚಯಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವವರೇ ಪಂಚಮಸಾಲಿಗಳಾಗಿದ್ದಾರೆ, ನಾಡಿನ ವಿವಿಧ ಮಠಗಳಿಗೆ ಸಮುದಾಯದ ಜನ ಅನೇಕ ಕೊಡುಗೆ ಕೊಟ್ಟಿರುವರು. ಅವರನ್ನು ಪರಿಚಯಿಸುವ ಕಾರ್ಯವನ್ನು ಈ ವರ್ಷದ ಮನೆ, ಮನದಲ್ಲಿ ಕೂಡಲಸಂಗಮ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.

ಕಲಬುರ್ಗಿ ಪಂಚಸೇನಾ ಅಧ್ಯಕ್ಷ ಸೋಮಶೇಖರ ಮಾಳಗಿ, ಮುಖಂಡರಾದ ಎಲ್.ಎಂ. ಪಾಟೀಲ, ಶರಣಪ್ಪ ಗಾಣಗೇರ, ಬಸವರಾಜ ಗೌಡರ, ಶೇಖರಗೌಡ ಗೌಡರ, ಗಿರೀಶಗೌಡ ಗೌಡರ ಮುಂತಾದವರು ಇದ್ದರು. ಶರಣು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಿದ್ದು ಪಾಟೀಲ ಸ್ವಾಗತಿಸಿದರು, ಆದಪ್ಪ ಗೊರಚಿಕ್ಕನವರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net