

ಮೈಸೂರು: ನಗರದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಆಯೋಜಿಸಿದ್ದ ‘ಆನೆ ಬಂತು ಆನೆ’ ಮಕ್ಕಳ ದಸರಾ ರಂಗ ಶಿಬಿರದ ಸಮಾರೋಪ ಸಮಾರಂಭ ಭಾನುವಾರ ಜರುಗಿತು.
ಹಾರ್ಡ್ವಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ 12 ದಿನಗಳ ಶಿಬಿರವನ್ನು ಸಿನಿಮಾ ಹಾಗೂ ರಂಗ ನಟ, ನಿರ್ದೇಶಕ ಸುಪ್ರೀತ್ ಭಾರದ್ವಜ್ ನಡೆಸಿಕೊಟ್ಟರು. ಸಮಾರೋಪದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ದಸರಾ ರಜೆಯ ಶಾಲೆಯ ಬಿಡುವಿನಲ್ಲಿ ಮಕ್ಕಳು ರಂಗ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕ್ರಿಯಾಶೀಲವಾಗಿ ತೊಡಗಿಸಿಕೊಂಡದ್ದರು ಎಂದು ಸ್ಮರಿಸಿದರು.
ಸಂಸ್ಥೆಯ ಸಂಚಾಲಕ ಚಲುವರಾಜು ಮಾತನಾಡಿ, ಸಂಸ್ಥೆಯ ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರಲ್ಲದೆ, ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಪಾಲಕರ ಸಹಕಾರ ಕೋರಿದರು.
ಪಾಲಕರಾದ ಬೆಂಗಳೂರಿನ ವೈಲ್ಡ್ ಲೈಫ್ ಪೋಟೋಗ್ರಾಫರ್ ಗೌರೀಶ್ ಕಪನಿ ಮಾತನಾಡಿ, ಬೆಂಗಳೂರಿನ ಮಕ್ಕಳಿಗೆ ಬೆಳೆವಣಿಗೆಯಲ್ಲಿ ಸಿಗಬೇಕಾದ ವಾತಾವರಣ ಇಂದು ಸಿಗುತ್ತಿಲ್ಲ. ಮಕ್ಕಳು ತಮ್ಮ ಬಾಲ್ಯದ ನೆನಪಿನ ಬುತ್ತಿ ಎಂದರೆ ಮೊಬೈಲ್ ಆಗಿಬಿಟ್ಟಿದೆ. ಇದನ್ನು ತಪ್ಪಿಸಿ, ಮಕ್ಕಳಲ್ಲಿನ ಸೃಜನಶೀಲತೆಯ ಪ್ರದರ್ಶನಕ್ಕೆ ದಾರಿ ಮಾಡಿಕೊಡುವುದರಲ್ಲಿ ಈ ಶಿಬಿರ ಯಶಸ್ವಿಯಾಗಿದೆ ಎಂದರು.
ಶಿಬಿರದಲ್ಲಿ ಆದ್ವೈ ತೇಜಸ್ವಿ, ಅನಿಕೇತನಾ, ಬಿ.ಆರ್. ನಿಶಾಂಕ್, ಚಿರಂತ್, ಡಿ.ಶಿವಾನಿ, ಶಾರದಾ, ದನ್ವಿತ್, ಹಿತಾ, ವಿರಾಜ್, ಎಸ್.ಅನಿಕೇತನಾ, ಅವನಿ, ಅಕ್ಷರಾ, ಇಂಚರಾ, ಬಿ.ಆರ್.ನಿಶಿತಾ, ಎಸ್.ಕಿರಣ, ದತ್ತ, ಶ್ರೀಶಾ, ಎಸ್.ಹರ್ಷ, ಎಸ್.ಪತ್ಯಕ್ಷಾ, ಎಸ್.ಎನ್.ಕುಲದೀಪ್ ಈಶ್ವರ್, ವಿ.ಎಲ್.ಶಶಾಂಕ, ವಿಸ್ಮಿತಾ, ಸಕಿಯಾ, ಜಿ.ಎನ್.ಕವಿತಾ ಭಾಗಿಯಾಗಿದ್ದರು. ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯ ಚಲುವರಾಜ್, ಜೀವನಮುಕ್ತ, ರಾಜೇಶ್ ಬಸವಣ್ಣ ಇತರರು ಇದ್ದರು.
ಸುಪ್ರೀತ್ ಭಾರದ್ವಾಜ್ ನೇತೃತ್ವದಲ್ಲಿ ಮಕ್ಕಳ ನಾಟಕದ ತುಣುಕು ಪ್ರರ್ದಶಿಸಿದರು.