

ಎನ್.ಮುನಿವೆಂಕಟೇಗೌಡ, ಕೋಲಾರ
ಕೋಲಾರ ನಗರದಲ್ಲಿರುವ ಹಳೆಯ ಎರಡು ಗಡಿಯಾರ ಗೋಪುರಗಳ ಮುಳ್ಳು ಓಟ ನಿಲ್ಲಿಸಿದ್ದು, ಕ್ಲಾಕ್ ಟವರ್ ಒಂದು ಗಡಿಯಾರ ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ, ಹಳೇ ಬಸ್ ನಿಲ್ದಾಣವು ಸಂಪೂರ್ಣ ಸ್ವರೂಪವನ್ನೇ ಕಳೆದುಕೊಂಡು ಕಸದ ರಾಶಿ ಹಾಕುವ ಜಾಗವಾಗಿ ಮಾರ್ಪಟ್ಟಿದೆ.
ನಗರದ ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರ 86 ವರ್ಷದ ಹಿಂದೆ ನಗರದ ಪ್ರಮುಖ ದ್ವಾರ ಬಾಗಿಲು ಆಗಿತ್ತು. ಹಳೇ ಬಸ್ ನಿಲ್ದಾಣದಲ್ಲೂ 68 ವರ್ಷದ ಹಿಂದೆ ಮತ್ತೊಂದು ಗಡಿಯಾರ ಗೋಪುರ ನಿಮಾರ್ಣವಾಗಿತ್ತು. ಆದರೆ ಈ ಎರಡು ಗೋಪುರಗಳ ಮೇಲಿರುವ ಗಡಿಯಾರಗಳು ಮೂಲೆಗುಂಪಾಗಿವೆ.
ಕ್ಲಾಕ್ ಟವರ್ ವೃತ್ತದಲ್ಲಿ ವರ್ಷದ ಎಲ್ಲ ದಿನಗಳಲ್ಲೂ ಭದ್ರೆತೆ ಇದ್ದೇ ಇರುತ್ತದೆ. ಒಂದು ಕೋಮಿನ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು, ಈ ಹಿಂದೆ ಹಲವು ಬಾರಿ ಇಲ್ಲಿ ಗಲಾಟೆಗಳಾಗಿದ್ದು, ಸದ್ಯ ನಗರದ ವಿವಾದಿತ ಪ್ರದೇಶ ಎಂದೇ ಗುರ್ತಿಸಲ್ಪಟ್ಟಿದೆ. ಆದರೆ ಕೆಲ ವರ್ಷಗಳ ಹಿಂದೆ ಕ್ಲಾಕ್ ಟವರ್ ವೃತ್ತದಲ್ಲಿರುವ ಗಡಿಯಾರ ಗೋಪುರಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ನಾಲ್ಕು ದಿಕ್ಕುಗಳಲ್ಲಿದ್ದ ಗಡಿಯಾರಗಳಲ್ಲಿ 3 ಭಾಗದಲ್ಲಿ ಕಾಣದಂತೆ ಶೀಟ್ ಮುಚ್ಚಲಾಗಿದೆ.
ಇದೇ ರೀತಿ ಹಳೇ ಬಸ್ ನಿಲ್ದಾಣದ ಮಧ್ಯ ಭಾಗದಲ್ಲಿರುವ ಗೋಪುರದಲ್ಲಿಯೂ ಗಡಿಯಾರಗಳು ಕೆಟ್ಟು ನಿಂತಿವೆ. ಸುತ್ತಲೂ ವ್ಯಾಪಾರಸ್ಥರು ತಂಗುದಾಣ ಸೇರಿಸಿಕೊಂಡು ಪೆಟ್ಟಿಗೆ ಅಂಗಡಿಗಳನ್ನು ನಿಮಾರ್ಣ ಮಾಡಿಕೊಂಡಿದ್ದಾರೆ. ಮೇಲ್ಭಾಗ ಕಾಣುವ ಗೋಪುರಕ್ಕೆ ಬಣ್ಣ ಬಳಿಯಲಾಗಿದ್ದು, ಕೆಳಭಾಗದಲ್ಲಿ ಕಸದ ತೊಟ್ಟಿ ನಿಮಾರ್ಣವಾಗಿದೆ. ಅಂಗಡಿಗಳ ತ್ಯಾಜ್ಯ ಗಡಿಯಾರ ಗೋಪುರ ಪಕ್ಕದಲ್ಲಿ ಎಸೆಯುತ್ತಿದ್ದಾರೆ.
ಈ ಗೋಪುರಗಳಿಗೆ ಕಳೆದ 3 ವರ್ಷಗಳ ಹಿಂದೆ ಮಾಜಿ ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ನಲ್ಲಿರುವ ಗೋಪುರದ ಮೇಲೆ ಸ್ವಾತಂತ್ರ ದಿನದಂದು ರಾಷ್ಟ್ರಧ್ವಜ ಹಾರಿಸಲು ಒಂದು ಕೋಮಿನವರು ಕಟ್ಟಿದ್ದ ಬ್ಯಾನರ್ ತೆರವುಗೊಳಿಸಿ ಸುಣ್ಣ ಬಣ್ಣ ಬಳಸಿ ಬಿಗಿ ಬಂದೋಬಸ್ತ್
ನಡುವೆ ರಾಷ್ಟ್ರಧ್ವಜ ಹಾರಿಸಲಾಗಿತ್ತು.
ಪ್ರಯಾಣಿಕರ ತಂಗುದಾಣ ಮತ್ತು ಬಸ್ ನಿಲ್ದಾಣವಿದ್ದ ಜಾಗದಲ್ಲಿ ಹಿಂದೆ ಗಡಿಯಾರ ಗೋಪುರ ನಿರ್ಮಾಣ ಮಾಡಲಾಗಿತ್ತು.ವಿಪರ್ಯಾಸವೆಂದರೆ ನಗರಸಭೆ ಪಕ್ಕದಲ್ಲೆ ಇರುವ ಗೋಪುರವಾದರೂ, ತಲೆಕೆಡಿಸಿಕೊಂಡಿಲ್ಲ. ಇದೀಗ ಹಳೇ ಬಸ್ ನಿಲ್ದಾಣವೂ ಕಸದ ತೊಟ್ಟಿಯಂತಾಗಿದೆ. ಗೋಪುರದ ಕೆಳಗೆ ತಂಗುದಾಣ ಸ್ವಚ್ಛಗೊಳಿಸಿ ಗಡಿಯಾರ ರಿಪೇರಿ ಮಾಡಿಸಬೇಕು. ಕೋಲಾರದ ಹಳೇ ಬಸ್ನಿಲ್ದಾಣ ವೃತ್ತದಲ್ಲಿರುವ ಗೋಪುರದಲ್ಲಿ ಗಡಿಯಾರಗಳು ಕೆಟ್ಟು ನಿಂತಿರುವುದು. - ಕೃಷ್ಣ ಹಳೇ ಬಸ್ನಿಲ್ದಾಣದ ವ್ಯಾಪಾರಸ್ಥ ಹಳೇ ಬಸ್ನಿಲ್ದಾಣದಲ್ಲಿರುವ ಗಡಿಯಾರ ಗೋಪುರದ ಕೆಳಗಡೆ ಇರುವ ಕಸದ ರಾಶಿ ತೆರವುಗೊಳಿಸಲಾ ಗುವುದು. ಹಾಗೂ ಗಡಿಯಾರ ರಿಪೇರಿ ಮಾಡುವ ತಜ್ಞರನ್ನು ಹುಡುಕಲಾಗುತ್ತಿದೆ. ತಜ್ಞರು ಸಿಕ್ಕಿದ ತಕ್ಷಣ ಎರಡೂ ಗೋಪುರಗಳ ಗಡಿಯಾರ ರಿಪೇರಿ ಮಾಡಿಸಲಾಗುವುದು. - ಲಕ್ಷ್ಮೀದೇವಮ್ಮ ನಗರಸಭೆ ಅಧ್ಯಕ್ಷೆ, ಕೋಲಾರ ಕ್ಲಾಕ್ ಟವರ್ಗೆ ತನ್ನದೇ ಆದ ಇತಿಹಾಸವಿದ್ದು, ಗಡಿಯಾರ ಕೆಟ್ಟು ನಿಂತರೂ, ಜಿಲ್ಲಾಡಳಿತ ಮತ್ತು ನಗರಸಭೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಹೀಗಾಗಿ ಕ್ಲಾಕ್ ಟವರ್ ಎಂಬ ಪದದ ಅರ್ಥವೇ ಇಲ್ಲದಂತಾಗಿದ್ದು, ಕೂಡಲೇ ಕೆಟ್ಟು ನಿಂತಿರುವ ಮೂರು ಗಡಿಯಾರಗಳನ್ನು ದುರಸ್ತಿಗೊಳಿಸಬೇಕು. - ಸಾಧಿಕ್ ಅಹಮದ್ ಸ್ಥಳಿಯ