ಮೂವರು ಸರಗಳ್ಳರನ್ನು ಬಂಧಿಸಿರುವ ನಗರ ಪೊಲೀಸರು 5.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡೆಸಿಕೊಂಡಿದ್ದಾರೆ

crime
Published on

ಮೈಸೂರು: ಮೂವರು ಸರಗಳ್ಳರನ್ನು ಬಂಧಿಸಿರುವ ನಗರ ಪೊಲೀಸರು 5.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡೆಸಿಕೊಂಡಿದ್ದಾರೆ.
ಅಶೋಕಪುರಂ ಪೊಲೀಸ್ ಠಾಣಾ ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಶೋಕಪುರಂ, ಕೃಷ್ಣರಾಜ ಪೊಲೀಸ್ ಠಾಣೆ ಹಾಗೂ ಕೃಷ್ಣರಾಜ ಉಪವಿಭಾಗದ ಅಪರಾಧ ವಿಭಾಗದ ಪೊಲೀಸರ ವಿಶೇಷ ತಂಡ ಶುಕ್ರವಾರ ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಶೋಕಪುರಂ ಹಾಗೂ ವಿ.ವಿ.ಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಲಾ ಒಂದು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net