ತರಗತಿ ಬಹಿಷ್ಕರಿಸಿ ಪ್ರತಿಭಟನೆಗಿಳಿದ ಮಕ್ಕಳು

21bdvt1
ಭದ್ರಾವತಿ ತಾಲೂಕು ಅರಳಿಹಳ್ಳಿ ಶಾಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಶಾಲಾ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದರು
Published on

ಭದ್ರಾವತಿ: ಮುಖ್ಯಶಿಕ್ಷಕರ ವರ್ಗಾವಣೆ ಖಂಡಿಸಿ ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಂಭಾಗ ಬುಧವಾರ ಪಾಲಕರು ಪ್ರತಿಭಟನೆ ನಡೆಸಿದ್ದರೆ, ಗುರುವಾರ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲೆ ಮುಂಭಾಗ ಧರಣಿ ಕುಳಿತರು.

ನಮ್ಮ ಶಾಲೆಯ ಮುಖ್ಯಶಿಕ್ಷಕರು (ಮೋತಿನಾಯ್ಕ) ಉತ್ತಮವಾಗಿ ಪಾಠ ಮಾಡುತ್ತಿದ್ದು ಅವರನ್ನು ಬೇರೆ ತಾಲೂಕಿನ ಶಾಲೆಗೆ ನಿಯೋಜನೆ ಮಾಡಲಾಗಿದೆ. ಇದರಿಂದ ನಮ್ಮ ಕಲಿಕೆಗೆ ಅನಾನುಕೂಲವಾಗಿದೆ. ನಮ್ಮನ್ನು ನಮ್ಮ ಪಾಲಕರಂತೆ ಪ್ರೀತಿಯಿಂದ ಮಾತನಾಡಿಸಿ ಅರ್ಥವಾಗುವಂತೆ ಪಾಠ ಮಾಡುತ್ತಿದ್ದ ಮುಖ್ಯಶಿಕ್ಷಕರು ನಮಗೆ ಬೇಕು. ಶೈಕ್ಷಣಿಕ ಪ್ರಗತಿ ಸೇರಿದಂತೆ ಆಟೋಟಗಳಲ್ಲಿಯೂ ಸಾಧನೆ ಮಾಡುವಂತೆ ನಮ್ಮನ್ನು ಪ್ರೇರೆಪಿಸಿದ್ದಾರೆ. ಅವರಿಲ್ಲದೆ ನಮ್ಮ ಶಿಕ್ಷಣ ಸುಧಾರಣೆ ಸಾಧ್ಯವಿಲ್ಲ. ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿರುವುದನ್ನು ಹಿಂಪಡೆಯಬೇಕು. ಕೂಡಲೇ ನಮ್ಮ ಮುಖ್ಯಶಿಕ್ಷಕರು ನಮ್ಮ ಶಾಲೆಗೇ ವಾಪಸ್ ಬರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶಾಲಾ ಸಮವಸ್ತ್ರದಲ್ಲಿಯೆ ಮಧ್ಯಾಹ್ನದ ವರೆಗೂ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಂತರ ಶಾಲೆಗೆ ಹಾಜರಾಗದೆ ಮನೆಗಳಿಗೆ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net