ಕಾಗದ ದೋಣಿ ಬಿಟ್ಟು ಸಂಭ್ರಮಿಸಿದ ಮಕ್ಕಳು

KMT PAPER DONI
Published on

ಕುಮಟಾ: ಇಲ್ಲಿನ ಕೊಂಕಣ ಎಜುಕೇಷನ್ ಟ್ರಸ್ಟ್​ನ ಅಂಗಸಂಸ್ಥೆಯಾದ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರದಲ್ಲಿ ವಿದ್ಯಾರ್ಥಿಗಳು ಮಳೆ ನೀರನ್ನು ಪೂಜಿಸಿ, ರಂಗುರಂಗಿನ ಕಾಗದದ ದೋಣಿ ಬಿಟ್ಟು ಸಂಭ್ರಮಿಸುವ ಜತೆಗೆ ನೀರಿನ ಮಹತ್ವದ ಪಾಠ ಕಲಿತರು.

ಮಕ್ಕಳಲ್ಲಿ ಪರಿಸರದೊಂದಿಗೆ ಮಾನವ ಬದುಕಿನ ಅವಿನಾಭಾವ ಸಂಬಂಧ, ಧಾರ್ವಿುಕ ಭಾವದ ಜತೆಗೆ ನೀರಿನ ಮಹತ್ವದ ಅರಿವನ್ನು ಎಳೆವೆಯಲ್ಲೇ ಮೂಡಿಸುವ ಉದ್ದೇಶದಿಂದ ಜಲಪೂಜನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆರಂಭದಲ್ಲಿ ಬಾಲಮಂದಿರದ ಎಲ್ಲ ಮಕ್ಕಳು ಶ್ಲೋಕ ಪಠಣ ನಡೆಸಿದರೆ ಬಾಲಮಂದಿರದ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಗಡೆ ಹಾಗೂ ಸರಸ್ವತಿ ವಿದ್ಯಾಕೇಂದ್ರದ ಮುಖ್ಯಶಿಕ್ಷಕಿ ಸುಜಾತಾ ನಾಯ್ಕ ಜಲಪೂಜನ ನಡೆಸಿಕೊಟ್ಟರು. ನಂತರ ಮಕ್ಕಳು ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಕಾಗದದ ಬಣ್ಣಬಣ್ಣದ ದೋಣಿಗಳನ್ನು ಸ್ವತಃ ತಯಾರಿಸಿ ಮಳೆಯ ನೀರಲ್ಲಿ ಹರಿಬಿಟ್ಟು ಖುಷಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net