ಶಿಕ್ಷಕರಿಲ್ಲ ಎಂದು ಬಿಇ ಓ ಕಚೇರಿಗೆ ಬಂದು ಕುಳಿತ ಮಕ್ಕಳು

2 ckm 9
ಚಿಕ್ಕಮಗಳೂರಿನ ಬಿ ಇ ಓ ಕಚೇರಿಯಲ್ಲಿ ತಮ್ಮ ಶಾಲೆಗೆ ಶಿಕ್ಷಕರನ್ನು ಒದಗಿಸುವಂತೆ ಒತ್ತಾಯಿಸಿ ಪಟ್ಟು ಹಿಡಿದು ಕುಳಿತಿರುವ ಮೇಲಿನ ಹುಲವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.
Published on

ಚಿಕ್ಕಮಗಳೂರು: ನಮ್ಮ ಶಾಲೆಗೆ ಒಬ್ಬರು ಶಿಕ್ಷಕರು ಇಲ್ಲ ಎಂದು ವಿದ್ಯಾರ್ಥಿಗಳು ನಗರದ ಬಿಇಒ ಕಚೇರಿಗೆ ಬಂದು ಕುಳಿತಿರುವ ಘಟನೆ ಸೋಮವಾರ ನಡೆದಿದೆ. ರಾತ್ರಿಯಾದರೂ ಮಕ್ಕಳು ಬಿಇಓ ಕಚೇರಿಯಲ್ಲಿಯೇ ಕುಳಿತು ತಮ್ಮ ಶಾಲೆಗೆ ಶಿಕ್ಷಕರನ್ನು ಒದಗಿಸುವಂತೆ ಪಟ್ಟು ಹಿಡಿದಿದ್ದಾರೆ.

ಚಿಕ್ಕಮಗಳೂರು ತಾಲೂಕು ಮೇಲಿನ ಹುಲವತ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 9 ವಿದ್ಯಾರ್ಥಿಗಳು ಬಿಇಓ ಕಚೇರಿಯಲ್ಲಿ ಬಂದು ಕುಳಿತಿದ್ದಾರೆ. ಶಾಲೆಯಲ್ಲಿದ್ದ ಓರ್ವ ಶಿಕ್ಷಕರು ವರ್ಗಾವಣೆಯಾಗಿ ತೆರಳಿದ್ದಾರೆ. ಆದರೆ ಶಾಲೆಗೆ ಹೊಸ ಶಿಕ್ಷಕರು ಬರುವ ಮುನ್ನವೇ ಹಳೆಯ ಶಿಕ್ಷಕರನ್ನು ರಿಲೀವ್ ಮಾಡಲಾಗಿದೆ.
ಹೀಗಾಗಿ ಮೇಲಿನ ಹುಳುವತ್ತಿ ಗ್ರಾಮದ ಶಾಲೆಯಲ್ಲಿದ್ದ ಓರ್ವ ಶಿಕ್ಷಕರು ವರ್ಗಾವಣೆಯಾಗಿದ್ದರಿಂದ ಶಾಲೆಯಲ್ಲಿ ಯಾವುದೇ ಶಿಕ್ಷಕರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳಲ್ಲಿ ಯಾವುದೇ ಪಾಠ ಪ್ರವಚನಗಳು ನಡೆಯದ ಹಿನ್ನೆಲೆಯಲ್ಲಿ ಮಕ್ಕಳು ತಮಗೆ ಕೂಡಲೇ ಶಿಕ್ಷಕರನ್ನು ಒದಗಿಸುವಂತೆ ಒತ್ತಾಯಿಸಿ, ನೇರವಾಗಿ ಬಿಇಓ ಕಚೇರಿಗೆ ಬಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಸ್ಥಳಕ್ಕೆ ಬಿಇಓ ಬಂದು ಶಾಲೆಗೆ ಶಿಕ್ಷಕರನ್ನು ಕಲ್ಪಿಸಬೇಕು ಅಲ್ಲಿಯವರೆಗೂ ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net