ಶಿಶುಪಾಲನಾ ಕೇಂದ್ರ ಪರಿಶೀಲಿಸಿದ ಜಿಪಂ ಸಿಇಒ ಸ್ವರೂಪ ಟಿ.ಕೆ.

PARISHILANE
Published on

ಕುಂದಗೋಳ: ತಾಲೂಕಿನ ಬು. ತರ್ಲಘಟ್ಟ, ಕಮಡೊಳ್ಳಿ, ಶಿರೂರು, ಗುಡೇನಕಟ್ಟಿ, ಹಿರೇನೆರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಶಿಶುಪಾಲನಾ ಕೇಂದ್ರಗಳಿಗೆ ಬುಧವಾರ ಜಿಪಂ ಸಿಇಒ ಸ್ವರೂಪ ಟಿ.ಕೆ. ಭೇಟಿ ನೀಡಿ ಪರಿಶೀಲಿಸಿದರು. ‘ಆ. 15ರಂದು ತಾಲೂಕಿನಲ್ಲಿ ಒಟ್ಟು 17 ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಲು ಶಿಶುಪಾಲನಾ ಆರೈಕೆದಾರರಿಗೆ ಐದು ದಿನಗಳ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆರೈಕೆದಾರರಿಗೆ ತಿಳಿಸಬೇಕು. ಶಿಶುಪಾಲನಾ ಕೇಂದ್ರಗಳು ಹೇಗೆ ಕೆಲಸ ಕಾರ್ಯಕ್ರಮಗಳನ್ನು ನಿರ್ವಹಿಸುತ್ತವೆ. ಅವುಗಳ ಉದ್ದೇಶಗಳೇನು ಎಂಬುದರ ಕುರಿತು ಮಾಹಿತಿ ನೀಡಿದರು. ತಾಪಂ ಇಒ ಡಾ.ಮಹೇಶ ಕುರಿ, ಸಹಾಯಕ ನಿರ್ದೇಶಕ ಶರಣು ಜಂತಕಲ್, ಪಿಡಿಒಗಳಾದ ನವಾಬಸಾಬ್ ನದಾಫ್, ಎಂ.ಬಿ. ಪಾಟೀಲ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net