

ಕುಷ್ಟಗಿ: ಪಟ್ಟಣದ ಆರಾಧ್ಯ ದೈವ ಅಡವಿ ಮುಖ್ಯ ಪ್ರಾಣೇಶ(ಅಡವಿರಾಯ) ದೇವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ ಮಹಾರಥೋತ್ಸವ ಜರುಗಿತು. ಬೆಳಗ್ಗೆ ಅಡವಿರಾಯ ಮೂರ್ತಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಸರ್ವಾಲಂಕೃತ ಅಡವಿರಾಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀ ವ್ಯಾಸ ಪೂಜಾ, ರಥಾಂಗ ಹಾಗೂ ಪವಮಾನ ಹೋಮ ಹಾಗೂ ಸತ್ಯನಾರಾಯಣ ಪೂಜೆ ನಡೆಯಿತು. ಸಂಜೆ ಜರುಗಿದ ಮಹಾರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಸಾಕ್ಷಿಯಾದರು. ರಥೋತ್ಸವ ನಂತರ ಹರಿವಾಣ ಸೇವೆ, ಪತ್ತಾಸೇವೆ ನಡೆಯಿತು.