

ಗುಳೇದಗುಡ್ಡ: ಪಟ್ಟಣದ ಅಕ್ಕಲಕೋಟೆಯ ರಾಜಯೋಗಿ ಶ್ರೀ ರೇವಣಸಿದ್ಧ ಶಿವಶರಣರ ಮಠದ ಜಾತ್ರಾಮಹೋತ್ಸವದ ಅಂಗವಾಗಿ ರಥೊತ್ಸವವು ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಂಜೆ 6.30ಕ್ಕೆ ರೇವಣಸಿದ್ಧ ಶಿವಶರಣರ ರಥೋತ್ಸವ ಜರುಗಿತು. ನಂತರ ಕೈಲಾಸ ಮಂಟಪ ಪೂಜೆ ನೆರವೇರಿಸಲಾಯಿತು.
ಆಳಂದದ ಶಿವಶರಣಮಠದ ಚನ್ನಬಸವಪಟ್ಟದೇವರು, ಮೈಂದರಗಿಯ ಅಭಿನವ ರೇವಣಸಿದ್ಧಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು. ಸಮಿತಿ ಅಧ್ಯಕ್ಷ ಗುರಪ್ಪ ಗೌಡ್ರ, ಲಕ್ಷ್ಮಣ ದಡ್ಡಿ, ಬಿ.ಎನ್. ವಜ್ರಬಂಡಿ, ಮಲ್ಲಿಕಾರ್ಜುನ ಮುದೆನೂರ, ನಾಗೇಶ ಸಿದ್ದಣ್ಣವರ, ಬಾಲಚಂದ್ರ ಕೊಳ್ಳಿ, ನಾರಾಯಣಪ್ಪ ಚಿತ್ರಗಾರ, ಮಲ್ಲಿಕಾರ್ಜುನ ಸೂಡಿ, ಶರಣಪ್ಪ ದಿಂಡಿ ಮತ್ತಿತರರಿದ್ದರು.