

ರಾಮದುರ್ಗ: ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಪಡಕೋಟ ಗಲ್ಲಿಯ ರಾಯರ ಮಠದಲ್ಲಿ ಬೆಳಗ್ಗೆ ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ರಾಯರ ಮಠದಿಂದ ಪ್ರಾರಂಭಗೊಂಡ ಮಹಾ ರಥೋತ್ಸವ ತೇರ ಬಜಾರದ ಶ್ರೀ ಗಾಂಧಿ ಪುತ್ಥಳಿಯ ಬಳಿ ಆಗಮಿಸಿ ಮಹಾ ಮಂಗಳಾರತಿ ನೆರವೇರುವ ಮೂಲಕ ಪುನಃ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದ ಹತ್ತಿರ ಆಗಮಿಸಿತು.
ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ವಂದಾವನಕ್ಕೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬ್ರಾಹ್ಮಣ ಸಮುದಾಯದ ಅಧ್ಯಕ್ಷ ಪ್ರಸಾದ ಕುಲಕರ್ಣಿ, ಆನಂದ ಕುಲಕರ್ಣಿ, ಬಿ.ಬಿ. ಮೋಡಕ, ಗೋಪಾಲಾಚಾರ್ಯ ಬಿಂದಗಿ, ವಾದಿರಾಜ ಡ್ನೀಸ್, ವಿದ್ಯಾಧರ ಕುಲಕರ್ಣಿ, ಪವನ ದೇಶಪಾಂಡೆ ಹಾಗೂ ಭಕ್ತರು ಇದ್ದರು.