ಎಐನಿಂದ ನೈತಿಕತೆಯೇ ಸವಾಲು

Untitled-3
ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ 'ಕೃತಕ ಬುದ್ದಿಮತ್ತೆ ಯುಗದಲ್ಲಿ ಸಮೂಹ ಮಾಧ್ಯಮದ ಸವಾಲುಗಳು ಮತ್ತು ಅವಕಾಶಗಳು' ವಿಶೇಕ್ಷ ಉಪನ್ಯಾಸ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ ನಿರಂಜನ್​ ವಾನಳ್ಳಿ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಸದಾಶಿವ ರಾಮಚಂದ್ರಗೌಡ, ಐಕ್ಯೂಎಸಿ ಸಂಯೋಜಕ ಡಾ. ಬಿ ಆರ್​ ಗಂಗಾಧರಯ್ಯ, ಪತ್ರಿಕೋದ್ಯಮ ಉಪನ್ಯಾಸಕ ಡಾ.ಸತೀಶ ಕೆ. ಇಟಗಿ, ಪ್ರಾಧ್ಯಾಪಕಿ ಡಾ. ಶೋಭಾ ಮಲ್ಲಾರಿ ಉಪಸ್ಥಿತರಿದ್ದರು.
Published on

ದೊಡ್ಡಬಳ್ಳಾಪುರ: ಸಮೂಹ ಮಾಧ್ಯಮದಲ್ಲಿ ಕೃತಕ ಬುದ್ದಿಮತ್ತೆ ಬೆಳೆಯುತ್ತಿದ್ದಂತೆ ವಸ್ತುನಿಷ್ಠತೆ ಮತ್ತು ನೈತಿಕತೆಯ ಕೊರತೆ ಎದುರಿಸುವುದೇ ಸವಾಲಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ ನಿರಂಜನ ವಾನಳ್ಳಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪತ್ರಿಕೋದ್ಯಮ ವಿಭಾಗ ದ ವತಿ ಯಿಂದ ಆಯೋ ಜಿಸಿದ್ದ 'ಕೃತಕ ಬುದ್ದಿ ಮತ್ತೆ ಯುಗದಲ್ಲಿ ಸಮೂಹ ಮಾಧ್ಯಮ ಗಳ ಸವಾಲುಗಳು ಮತ್ತು ಅವಕಾಶ ಗಳು' ಎಂಬ ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳಿಂದ ನಾಗರಿಕರೆಲ್ಲರೂ ಮಾಧ್ಯಮದವರೆ ಆಗಿದ್ದು, ಸಮೂಹ ಮಾಧ್ಯಮದ ಕುರಿತಾಗಿ ವ್ಯಾಖ್ಯಾನವೆ ಸವಾಲಾಗಿದೆ. ಅದರಲ್ಲೂ ಕೃತಕ ಬುದ್ದಿಮತ್ತೆಯ ಪ್ರಭಾವದಿಂದಾಗಿ ಸಮೂಹ ಮಾಧ್ಯಮದಲ್ಲಿ ತಾಳ್ಮೆಯಿಲ್ಲದೆ, ಸುದ್ದಿಯ ಗುಣಮಟ್ಟ ಕಾಪಾಡುವುದೇ ಸವಾಲಾಗಿದೆ. ಸಮಾಚಾರವು ಸಮುದಾಯದ ಎಲ್ಲ ಸ್ಥರದಲ್ಲಿಯೂ ಸಿಗುತ್ತದೆ, ಆದರೆ ಹೇಳಬಾರದ್ದನ್ನು ಪ್ರಚಾರಗೊಳಿಸಿದಾಗ ಸಮೂಹ ಮಾಧ್ಯಮ ವಿಶ್ವಾಸ ಕಳೆದುಕೊಳ್ಳುತ್ತದೆ. ಅದುವೇ ಎಲ್ಲರೂ ಮಾಧ್ಯಮದವರಾಗಿ ಸಮೂಹ ಮಾಧ್ಯಮದ ವಸ್ತುನಿಷ್ಠತೆ ಮತ್ತು ನೈತಿಕತೆಯ ಅವನತಿಗೆ ಕಾರಣವಾಗುತ್ತಿದ್ದಾರೆ ಎಂದರು. ಇತ್ತೀಚಿನ ಡಿಜಿಟಲ್​ ಸೌಲಭ್ಯಗಳು ಮತ್ತು ಕೃತಕ ಬುದ್ದಿಮತ್ತೆಯ ಪರಿಣಾಮದಿಂದಾಗಿ ಸಮೂಹ ಮಾಧ್ಯಮ ತನ್ನ ಅಳಿವು&ಉಳಿನವಿನೊಂದಿಗೆ ಭಯೋತ್ಪಾದನೆಯ ಸಂದಿಗ್ಧತೆಯನ್ನು ಎದುರಿಸಬೇಕಾಗಿದೆ. ಇದರಿಂದ ಅವಕಾಶಗಳು ಕಡಿಮೆಯಾಗಿ ಮಾಧ್ಯಮ ಅನ್ಯ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಸದಾಶಿವ ರಾಮಚಂದ್ರಗೌಡ ಮಾತನಾಡಿ ಕೃತಕ ಬುದ್ದಿಮತ್ತೆಯು ಸಮೂಹ ಮಾಧ್ಯಮದಲ್ಲಿ ಒಂಬತ್ತು ಕೋಟಿ ನೂತನ ಉದ್ಯೋಗ ಸೃಷ್ಠಿಸಿದರೆ, ಮೂಲತ@ 30 ಕೋಟಿ ಅವಕಾಶಗಳನ್ನು ಹಾಳು ಮಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net