ಕೇಂದ್ರ ಸರ್ಕಾರ ಮಹಾದಾಯಿ ನಿಲುವು ಸ್ಪಷ್ಟಪಡಿಸಲಿ

4 Dwd 3 (Shankar Ambali)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾದಾಯಿ ವಿಚಾರದಲ್ಲಿ ಗೋವಾ ಸರ್ಕಾರ ದಿನಕ್ಕೊಂದು ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಕ್ಯಾತೆ ತೆಗೆಯುವುದನ್ನು ಬಿಡಬೇಕು. ನ್ಯಾಯಾಧಿಕರಣದಲ್ಲಿ ತೀರ್ಪು ಬಂದ ನಂತರವೂ ಯೋಜನೆ ಅನುಷ್ಠಾನದಲ್ಲಿ ವಿಳಂಬ ಏಕೆ ಎಂಬುದರ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಮಹಾದಾಯಿಗಾಗಿ ಮಹಾವೇದಿಕೆ ಸಂಚಾಲಕ ಶಂಕರ ಅಂಬಲಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ನೀರು ಕೊಡಬಾರದು ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಇದಕ್ಕೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಮರ್ಪಕ ಭರವಸೆ ಕೊಟ್ಟಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ನ್ಯಾಯಾಧಿಕರಣದಲ್ಲಿ ತೀರ್ಪು ಧಿಕ್ಕರಿಸಿ ಭರವಸೆ ನೀಡಿರುವ ಕೇಂದ್ರ ಸಚಿವ ಭೂಪೇಂದ್ರ ಸ್ಪಷ್ಟನೆ ನೀಡಬೇಕು. ಮತ್ತೊಂದೆಡೆ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಾತಿನಂತೆ ನಡೆದುಕೊಳ್ಳಬೇಕು ಎಂದರು.

ರೈತ ಮುಖಂಡರಾದ ಶಂಕರಗೌಡ ಪಾಟೀಲ, ಲಕ್ಷ÷್ಮ್ಮಣ ಬಕ್ಕಾಯಿ, ಬಾಲಚಂದ್ರ ಸುರಕೋಡ, ಪ್ರವೀಣ ಯರಗಟ್ಟಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net