ಯಾವುದೇ ಭರವಸೆ ಈಡೇರಿಸಿಲ್ಲ ಕೇಂದ್ರ ಸರ್ಕಾರ

28 GJD 1 AG
Published on

ಗಜೇಂದ್ರಗಡ: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಲೋಕಸಭೆ ಅಭ್ಯರ್ಥಿ ಆನಂದ ಗಡ್ಡದೇವರಮಠ ಹೇಳಿದರು.

ತಾಲೂಕಿನ ಮ್ಯಾಕಲಝುರಿ, ಕುಂಟೋಜಿ, ಗೋಗೇರಿ ಹಾಗೂ ರಾಂಪುರ ಗ್ರಾಮಗಳಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಆದಾಯ ದುಪ್ಪಟ್ಟು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ, 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ, ಅವರ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ದೂರಿದರು.

ಭಾಷಣ ಮೊಟಕು: ಗೋಗೇರಿ ಗ್ರಾಮದ ಸಭೆಯಲ್ಲಿ ಆನಂದ ಅವರು ಭಾಷಣ ಮಾಡುವಾಗ ಮಸೀದಿಯಲ್ಲಿ ಆಜಾನ್ ಕೇಳಿಸಿತು. ತಕ್ಷಣ ಭಾಷಣ ನಿಲ್ಲಿಸಿ ಗೌರವ ಸೂಚಿಸಿದರು.

ಶಾಸಕ ಜಿ.ಎಸ್. ಪಾಟೀಲ, ಸಿದ್ದಪ್ಪ ಬಂಡಿ, ಶಿವರಾಜ ಘೊರ್ಪಡೆ, ಎಚ್.ಎಸ್. ಸೋಂಪುರ ಮಾತನಾಡಿದರು. ಲಡ್ಡುಮುತ್ಯಾ ತಾತನವರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕೆ.ಎಸ್. ಕೊಡತಗೇರಿ, ಚಂಬಣ್ಣ ಚವಡಿ, ಮಿಥುನ್ ಪಾಟೀಲ, ಮಲ್ಲಿಕಾರ್ಜುನ ಗಾರಗಿ, ಇಮಾಮಸಾಬ್ ಬಾಗವಾನ, ಶರಣಪ್ಪ ಬೆಟಗೇರಿ, ಮುತ್ತಣ್ಣ ಮ್ಯಾಗೇರಿ, ಶರಣು ಸೊಬರದ, ನಾಗಯ್ಯ ಗೊಂಗಡಶೆಟ್ಟಿಮಠ, ಮಂಜುಳಾ ರೇವಡಿ, ರಾಜೇಶ್ವರಿ ಕಾಲವಾಡಮಠ, ನೀಲಮ್ಮ ಬಳೂಟಗಿ, ಸಿದ್ದು ಗೊಂಗಡಶೆಟ್ಟಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net