

ರಾಯಚೂರು ಕೇಂದ್ರದ ರಕ್ಷಣಾ ವ್ಯವಸ್ಥೆ ಹಾಗೂ ಬೇಹುಗಾರಿಕೆಯ ವೈ-Àಲ್ಯದಿಂದಲೇ ಪಹಲ್ಗಾಮ್‌ನಲ್ಲಿ ಜನರು ಸಾವನಪ್ಪಿದ್ದು, ನರೇಂದ್ರ ಮೋದಿ ಅತ್ಯಂತ ದುರ್ಬಲ ಪ್ರಧಾನ ಮಂತ್ರಿಯಾಗಿದ್ದಾರೆAದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಟೀಕಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಲ್ವಾಮಾ ದಾಳಿಯಲ್ಲಿ ಕಾಶ್ಮೀರಕ್ಕೆ ೨೦೦ ಕೆ.ಜಿಯ ಆರï ಡಿಎಕ್ಸ್ ಹೇಗೆ ಬಂತು ಅಂತ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ಇದುವರೆಗೆ ಹೇಳಿಲ್ಲ. ಪ್ರಧಾನಿ ಮೋದಿ ಅವರು ಅಽಕಾರಕ್ಕೆ ಬಂದಾಗಿನಿAದ ಇದುವರೆಗೆ ಅನೇಕ ದಾಳಿಯಾಗಿವೆ, ಅನೇಕ ಸೈನಿಕರು, ಪ್ರವಾಸಿಗರು ಸಾವನ್ನಪ್ಪಿz್ದÁರೆ. ಅನೇಕರು ಆಸ್ತಿಪಾಸ್ತಿ ಕಳೆದುಕೊಂಡಿz್ದÁರೆ ಸಂವಿಧಾನದ ೨೧ ನೇ ಅನುಚ್ಛೇದದ ಪ್ರಕಾರ ದೇಶದ ನಾಗರಿಕರ ರಕ್ಷಣೆ,ಸ್ವಾತಂತ್ರ÷್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ ಇದನ್ನು ನಿರ್ವಹಣೆ ಮಾಡುವಲ್ಲಿ ಪ್ರಧಾನಿ ಮೋದಿ ವಿ-Àಲರಾಗಿz್ದÁರೆ ಎಂದು ವಾಗ್ದಾಳಿ ನಡೆಸಿದರು.
ದೇಶದ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸï ಪಕ್ಷ ಬೆಂಬಲಿಸಲಿದೆ, ಪಹಲ್ಗಾಮ ದಾಳಿಗೆ ಪ್ರತಿಕಾರವಾಗಿ ಯಾವುದೇ ನಿರ್ಧಾರ ಕೈಗೊಂಡಿದ್ದರೆ ಸಹಕಾರ ನೀಡಲಿದೆ. ಆದರೆ ಸೈನಿಕರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಪಹಲ್ಗಾಮï ದಾಳಿ ಹಿನ್ನೆಲೆಯಲ್ಲಿ ದುಬೈ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಬಿಹಾರದ ಚುನಾವಣಾ ಪ್ರಚಾರಕ್ಕೆ ತೆರಳಿ ಸಂತ್ರಸ್ಥರ ಸಾವಿನ ಕುರಿತು ಪ್ರತಿಕಾರದ ಹೇಳಿಕೆ ನೀಡಿ ರಾಜಕೀಯ ಲಾಭ ಪಡೆಯಲು ಯತ್ನಿಸಿರುವುದು, ಸರ್ವ ಪಕ್ಷಗಳ ಸಭೆಗೆ ಗೈರಾಗಿದ್ದು ಖಂಡನೀಯ ಎಂದರು.
ನಾನೂ ಜಾತಿ ಗಣತಿ ವರದಿ ಪಡೆಯಲು ಯತ್ನಿಸಿದರೂ ನನಗೆ ಸಿಕ್ಕಿಲ್ಲ, ಪರ, ವಿರೋಧವಾಗಿ ಮಾತನಾಡುವವರು ಒಮ್ಮೆ ಓದಬೇಕು ಬಳಿಕವೇ ಪ್ರಶ್ನೆ ಮಾಡಬೇಕು. ೫೪ ಮಾನದಂಡಗಳ ಮೇಲೆ ಸಮೀಕ್ಷೆ ನಡೆದಿದೆ. ಸಾಮಾಜಿಕ,ಆರ್ಥಿಕ, ಶೈಕ್ಷಣಿಕ ಆಧಾರದ ಮೇಲೆ ವರದಿ ತಯಾರಿಯಾಗಿದೆ. ಈ ಹಂತದಲ್ಲಿ ಪರ ವಿರೋಧ ಯಾರು ಮಾಡಬಾರದು, ಕರ್ನಾಟಕ ಶಾಂತಿಯ ತೋಟ,ಸರ್ವ ಧರ್ಮ ಸಮಾನತೆ ಕಾಪಾಡಿಕೊಂಡು ಬಂದಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ವರದಿ ಪ್ರಕಟಿಸಿ ಎರೆಡು ಸದನದಲ್ಲಿ ಚರ್ಚೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಮುರಳಿ ಯಾದವ್, ಶ್ರೀದೇವಿ ನಾಯಕ, ಮಂಜುಳಾ, ಮಾಲಾ ಭಜಂತ್ರಿ, ಖಾಸಿಂ ಬೀ, ಲಕ್ಷ್ಮೀ ಇದ್ದರು.