

ಮುಂಡರಗಿ: ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಕಾಲ ನಡೆದ ಕವಿರತ್ನ ಚನ್ನಕವಿ ಕೃತ ಶ್ರೀ ನಲವತ್ವಾಡದ ವೀರೇಶ್ವರ ಶರಣರ ಪುರಾಣ ಮಂಗಲೋತ್ಸವ ಪ್ರಯುಕ್ತ ಗುರುವಾರ ನಲವತ್ವಾಡದ ಶ್ರೀ ವೀರೇಶ್ವರ ಶರಣರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಅವರು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಿಂದ ಹೊರಟ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ಸಕಲ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡೊಳ್ಳು, ಸಮಾಳ ನೆರೆದಿದ್ದ ಜನರ ಗಮನ ಸೆಳೆಯಿತು. ಸುಮಂಗಲೆಯರು ಆರತಿಯೊಂದಿಗೆ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರವಚನಕಾರ ವಿರೂಪಾಕ್ಷ ಶಾಸ್ತ್ರಿಗಳು, ಪುರಾಣ ಸಮಿತಿ ಅಧ್ಯಕ್ಷ ಕುಮಾರ ಬನ್ನಿಕೊಪ್ಪ, ಉಪಾಧ್ಯಕ್ಷ ರಂಗಪ್ಪ ಕೋಳಿ, ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ, ಸಹಕಾರ್ಯದರ್ಶಿ ಪ್ರಶಾಂತಗೌಡ ಗುಡದಪ್ಪನವರ, ಖಜಾಂಚಿ ಮಂಜುನಾಥ ಶಿವಶೆಟ್ಟರ್, ಬಸವರಾಜ ಬನ್ನಿಕೊಪ್ಪ, ಕಾಂತರಾಜ ಹಿರೇಮಠ, ಎನ್.ಎಫ್. ಅಕ್ಕೂರ, ದೇವಪ್ಪ ರಾಮೇನಹಳ್ಳಿ, ವೀರೇಶ ಸಜ್ಜನರ, ಅಜ್ಜಪ್ಪ ಲಿಂಬಿಕಾಯಿ, ಲತಾ ಲಿಂಬಿಕಾಯಿ, ಶಕುಂತಲಾ ಗುಡದಪ್ಪನವರ, ಲೀಲಾ ಅಕ್ಕೂರ, ಗೌರಾದೇವಿ ಹಿರೇಮಠ, ದ್ರಾಕ್ಷಾಯಿಣಿ ಕಡ್ಡಿ, ಅನ್ನಪೂರ್ಣಮ್ಮ ಶಿವಶೆಟ್ಟರ್, ಸರೋಜಾ ಹಿರೇಮಠ, ದ್ರಾಕ್ಷಾಯಿಣಿ ಹಿರೇಮಠ, ಸೋಮನಾಥ ಗವಾಯಿಗಳು, ಹಾಲಯ್ಯ ಹಿರೇಮಠ, ಅಶೋಕ ಅಂಗಡಿ, ಕನಕಪ್ಪ ಕಾತರಕಿ, ಕೊಟ್ರಯ್ಯ ಹಿರೇಮಠ, ನಾಗಭೂಷಣ ಹಿರೇಮಠ ಹಾಗೂ ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದವರು ಇದ್ದರು.