

ಮಂಗಳೂರು: ಬೋಂದೆಲ್ ಮಹಾತ್ಮನಗರದಲ್ಲಿ ಪರಿಸರವಾದಿ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಗಿಡ ನೆಡುವ ಮೂಲಕ ಹುಟ್ಟು ಹಬ್ಬಾಚರಿಸಲಾಯಿತು.
ಮಹಾತ್ಮನಗರ ಬಡಾವಣೆಯ ಶುಭದೀಪ ಮನೆಯ ಸುಭಾಷ್ ಮತ್ತು ಜ್ಯೋತಿ ದಂಪತಿಯ ಪುತ್ರ ಆತ್ರೇಯ ಕೃಷ್ಣನ ಎರಡನೇ ವರ್ಷದ ಹುಟ್ಟುಹಬ್ಬ ಕೇಕ್ ಕ್ಯಾಂಡಲ್ ಇಲ್ಲದೆ, ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಹತ್ತಕ್ಕಿಂತಲೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದ ಈ ಸಮಾರಂಭದಲ್ಲಿ ಜಿಲ್ಲಾ ರಾಜ್ಯ ಪ್ರಶಸ್ತಿ ವಿಜೇತ ಪರಿಸರವಾದಿ ಕೃಷ್ಣಪ್ಪ ಅವರು ಮುಖ್ಯ ಅತಿಥಿಯಾಗಿದ್ದರು.
ರಾಮಚಂದ್ರ ಭಟ್ ಮತ್ತು ಸಚೀದೇವಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು. ಪರಿಸರವಾದಿ ಕೃಷ್ಣಪ್ಪ ಅವರು ಹುಟ್ಟುಹಬ್ಬಕ್ಕೊಂದು ಗಿಡ ನೆಡುವ ಯೋಜನೆಯನ್ನು ಜಾಗೃತಿ ಮೂಡಿಸಿದರು. ಹೆತ್ತವರ ಜತೆಗೂಡಿ 2 ವರ್ಷದ ಮಗು ಆತ್ರೇಯ ಕೃಷ್ಣನ ಕೈಯಲ್ಲಿ ಅವರೇ ಬೆಳೆಸಿ ತಂದ ಸಸಿಯನ್ನು ನೆಡಲಾಯಿತು.