ತಾಯಿ ಹತ್ಯೆಗೆ ಕಾರಣ ಇನ್ನೂ ನಿಗೂಢ

crime fir
Published on

ಬೆಂಗಳೂರು: ಹೆತ್ತ ತಾಯಿಯನ್ನು ಕೊಲೆ ಮಾಡಿ ಬಂಧನಕ್ಕೆ ಒಳಗಾಗಿರುವ ಪುತ್ರಿ ಅಮೃತಾ ಕೃತ್ಯಕ್ಕೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿದೆ. ಪ್ರೇಯಸಿ ಕೊಲೆ ಮಾಡಿರುವ ವಿಚಾರ ಪ್ರಿಯಕರನಿಗೆ ಗೊತ್ತಿರಲಿಲ್ಲ ಎನ್ನಲಾಗುತ್ತಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಅಕ್ಷಯನಗರದಲ್ಲಿ ಭಾನುವಾರ ನಡೆದಿದ್ದ ನಿರ್ಮಲಾ (54) ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಅಮೃತಾ ಮತ್ತು ಶ್ರೀಧರ್ ರಾವ್​ನನ್ನು ಅಂಡಮಾನ್​ನಲ್ಲಿ ಕೆ.ಆರ್.ಪುರ ಪೊಲೀಸರು ಬಂಧಿಸಿದ್ದರು. ಸ್ಥಳೀಯ ಕೋರ್ಟ್​ಗೆ ಆರೋಪಿಗಳನ್ನು ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ಮೇಲೆ ವಶಕ್ಕೆ ಪಡೆದು ಗುರುವಾರ ನಗರಕ್ಕೆ ಕರೆತರಲಾಗಿದೆ. ಡಿಸಿಪಿ ಎಂ.ಎನ್. ಅನುಚೇತ್ ಕೆ.ಆರ್. ಪುರ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸಿದರು.

ಆರೋಪಿಗಳು ಅಂಡಮಾನ್​ಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಫೆ.2ರ ಬೆಳಗಿನ ಜಾವ ತಾಯಿಯನ್ನು ಕೊಲೆ ಮಾಡಿದ ಅಮೃತಾ, ಶ್ರೀಧರ್​ಗೆ ಕರೆ ಮಾಡಿದ್ದಳು. ಬೈಕ್​ನಲ್ಲಿ ಬಂದು ಆಕೆಯನ್ನು ಕರೆದೊಯ್ದ ಶ್ರೀಧರ್ ವಿಮಾನದಲ್ಲಿ ಅಂಡಮಾನ್​ಗೆ ತೆರಳಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಅಂಡಮಾನ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪ್ರತಿದಿನ ಬೇರೆಬೇರೆ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ಆರೋಪಿಗಳನ್ನು

ಬುಧವಾರ ಬೆಳಗ್ಗೆ ಕಾಲಪಾನಿ ಜೈಲು ಬಳಿ ವಶ ಪಡೆಯಲಾಯಿತು ಎಂದು ವಿಜಯವಾಣಿ ಜತೆ ಮಾತನಾಡಿದ ಅನುಚೇತ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net