ಜಾನುವಾರು ಕೊಟ್ಟಿಗೆ ನೆಲಸಮ

nrp coleapse
ಭಾರಿ ಗಾಳಿಗೆ ಅರಳಿಕೊಪ್ಪದಲ್ಲಿ ಜಾನುವಾರು ಕೊಟ್ಟಿಗೆ ಕುಸಿದಿರುವುದು.
Published on

ಎನ್.ಆರ್.ಪುರ: ಗುಬ್ಬಿಗಾ ಗ್ರಾಪಂ ಅರಳಿಕೊಪ್ಪ ಗ್ರಾಮದ ಜಯಮ್ಮ ಎಂಬುವವರ ಜಾನುವಾರು ಕೊಟ್ಟಿಗೆ ಭಾರಿ ಗಾಳಿ-ಮಳೆಗೆ ನೆಲಸಮವಾಗಿದೆ.

ಗಾಳಿ ರಭಸಕ್ಕೆ ಜಾನುವಾರು ಕೊಟ್ಟಿಗೆ ಕುಸಿದಿದೆ. ಆ ವೇಳೆ ಕೊಟ್ಟಿಗೆಯಲ್ಲಿ ಜಾನುವಾರುಗಳು ಇರಲಿಲ್ಲ, ಕೊಟ್ಟಿಗೆಯಲ್ಲಿದ್ದ ಬೈಕ್ ಜಖಂಗೊಂಡಿದೆ. ಪಿಡಿಒ ಸೀಮಾ ಹಾಗೂ ಗ್ರಾಮ ಲೆಕ್ಕಿಗ ಸುನೀಲ್ ಸ್ಥಳ ಪರಿಶೀಲಿಸಿದರು. ಇನ್ನು ಕೂಸ್ಗಲ್ ರಂಗನಾಥ ಸ್ವಾಮಿ ದೇವಸ್ಥಾನದ ಪಕ್ಕದ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಮಣ್ಣು ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net