ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಕಾರು

23..npk -4 (2)
Published on

ನಾಪೋಕ್ಲು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಯ ಹಳ್ಳಕ್ಕೆ ಸರಿದು ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಬಚಾವಾದ ಘಟನೆ ಸಮೀಪದ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಬೆಳಗಿನ ಜಾವ ಜರುಗಿದೆ.


ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ಸಂಬಂಧಿಕರ ಮನೆಗೆ ಕೇರಳದಿಂದ ಬಂದ ಕುಟುಂಬವೊಂದು ಭೇಟಿ ನೀಡಿ ಹಿಂತಿರುಗುವ ಸಂದರ್ಭ ಕಕ್ಕಬೆಯ ಮರಂದೋಡ ಗ್ರಾಮದ ಕಬ್ಬಿನ ಕಾಡು ತಿರುವಿನಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಸ್ಥಳಿಯ ಗ್ರಾಮಸ್ಥರು ಕಾರನ್ನು ಮೇಲಕೆತ್ತಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net