

ಆಲೂರು : ಮಠದ ಕೊಪ್ಪಲಿನ ರಸ್ತೆಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಶುಕ್ರವಾರ ಕೆರೆಗೆ ಉರುಳಿ ಬಿದ್ದು ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಲೂರು ತಾಲೂಕಿನ ನವಿಲಹಳ್ಳಿ ಗ್ರಾಮದ ಸಬಸ್ಟಿನ್ ರಾಯಪ್ಪ (45), ಅಲ್ಫಾಸ್ ಕುಮಾರ್ (45), ಸ್ಟಾಲಿನ್ ರಾಯ್ (21) ಪಾರಾದವರು. ಇವರು ಮಗ್ಗೆ ಗ್ರಾಮದಲ್ಲಿರುವ ಚರ್ಚ್‌ಗೆ ತೆರಳಿದ್ದರು. ವಾಪಸ್ ಬರುವಾಗ ಮಠದ ಕೊಪ್ಪಲು ಗ್ರಾಮದ ಕೆರೆಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಸದ್ಯ ಯಾವುದೇ ಸಾವು-ನೋವು ಸಂಭವಿಸಿಲ್ಲ. ಮೂವರು ಸುರಕ್ಷಿತವಾಗಿದ್ದಾರೆ.