ಕಾರು ಬೆಂಕಿಗೆ ಆಹುತಿ

h10-car
Published on

ಹುಬ್ಬಳ್ಳಿ: ಸಮೀಪದ ನಲವಡಿ ಗ್ರಾಮದ ಟೋಲ್ ಬಳಿ ಭಾನುವಾರ ಬೆಂಕಿ ಆಕಸ್ಮಿಕದಿಂದ ಕಾರು ಸುಟ್ಟಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ.
ಗದಗಿನ ಸಿದ್ದಲಿಂಗನಗರದ ಪ್ರಥಮ ದರ್ಜೆ ಸಹಾಯಕ ಸುರೇಶ ಪಾಟೀಲ ಎನ್ನುವವರು ತಮ್ಮ ಗೆಳೆಯನೊಂದಿಗೆ ಕಾರಿನಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದರು. ಮರಳಿ ಗದಗಿಗೆ ಹೋಗುವಾಗ ಟೋಲ್‌ನಲ್ಲಿ ಹಣ ಪಾವತಿಸುವ ವೇಳೆ ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಮೇಲೆ ಕಾರು ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿ ಇಬ್ಬರೂ ಹೊರಬಂದಿದ್ದಾರೆ. ನಂತರ ಕಾರು ಬೆಂಕಿಗೆ ಆಹುತಿಯಾಗಿದೆ. ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net