ಕೌನ್ಸಿಲ್ ಸಭೆ ರದ್ದು ಖಂಡನೀಯ

10-mysoremunicipalcorporation (1)
Published on

ಆ.31 ರಂದು ನಿಗದಿಯಾಗಿದ್ದ ನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆಯನ್ನು ಪಾಲಿಕೆ ಆಯುಕ್ತರು ರದ್ದು ಮಾಡಿರುವುದು ಖಂಡನೀಯ. ಅವರ ವಿರುದ್ಧ ಮೇಯರ್ ಹೋರಾಟ ನಡೆಸಬೇಕು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಸಲಹೆ ನೀಡಿದ್ದಾರೆ.

ನಿಯಮದ ಪ್ರಕಾರ ಯಾವುದೇ ಕೌನ್ಸಿಲ್ ಸಭೆ ಮುಂದೂಡುವ ಹಾಗೂ ರದ್ದು ಮಾಡುವ ಅಧಿಕಾರ ಇರುವುದು ಮೇಯರ್ ಅವರಿಗೆ ಮಾತ್ರ. ಇದು 1976ರ ಕೆಎಂಸಿ ಆಕ್ಟ್‌ನಲ್ಲಿ ಸ್ಪಷ್ಟವಾಗಿದೆ. ಹೀಗಿದ್ದರೂ ಆಯುಕ್ತರು ಅಧಿಕಾರ ದುರ್ಬಳಕೆ ಮಾಡಿಕೊಂಡು ಸಭೆ ರದ್ದು ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಜತೆಗೆ ಮೇಯರ್ ಹುದ್ದೆಯನ್ನು ಅವಮಾನಿಸಿದ್ದಾರೆ. ಇದು ಆಯುಕ್ತರ ಉದ್ಧಟತನವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ನಿಗದಿಯಾಗಿದ್ದ ಸಭೆ ರದ್ದು ಮಾಡುವ ಮೂಲಕ ಪಾಲಿಕೆ ಮೇಯರ್ ಮತ್ತು ಸದಸ್ಯರ ಅಧಿಕಾರ ವ್ಯಾಪ್ತಿ ಮೊಟಕುಗೊಳಿಸಿದ್ದಾರೆ. ಜತೆಗೆ, ಮೇಯರ್ ಗಮನಕ್ಕೆ ಬಾರದೆ ಆಯುಕ್ತರಾದಿಯಾಗಿ ಎಲ್ಲ ಅಧಿಕಾರಿಗಳು ಕಾರ್ಯಕ್ಷೇತ್ರ ಬಿಟ್ಟು ಹೋಗಿದ್ದಾರೆ. ಇದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net