ಸಿಎಎ ಬೆಂಬಲಿಸಿ ಅಂಚೆಪತ್ರ ಚಳವಳಿ

RBS_1588
Published on

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ(ಸಿಎಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಾಮರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ಎಲ್.ನಾಗೇಂದ್ರ, ಮಾಜಿ ಎಂಎಲ್‌ಸಿ ತೋಂಟದಾರ್ಯ ಅವರ ನೇತೃತ್ವದಲ್ಲಿ ಅಂಚೆಪತ್ರ ಚಳವಳಿ ನಡೆಸಿದರು.

ಸೋಮವಾರ ನಗರದ ಕೇಂದ್ರ ಅಂಚೆ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಕಾಯ್ದೆ ಬೆಂಬಲಿಸಿ ಸಹಿ ಹಾಕಿದ ಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿದರು.ಪಾಲಿಕೆ ಸದಸ್ಯರಾದ ಸುಬ್ಬಯ್ಯ, ಸತೀಶ್, ವೇದಾವತಿ, ಪ್ರಮೀಳಾ ಭರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net