ಸರ್ಕಾರದ ಬಲ ಹೆಚ್ಚಿಸಿದ ಉಪಚುನಾವಣೆ ಗೆಲುವು

NRGL VIJAYOSTVA
Published on

ನರೇಗಲ್ಲ: ರಾಜ್ಯದಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಪ್ರಬಲವಾಗಿದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಸರ್ಕಾರಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಈ ಚುನಾವಣೆ ಫಲಿತಾಂಶವು ಸರ್ಕಾರ ಸರಿದಾರಿಯಲ್ಲಿ ನಡೆಯುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ರೋಣ ಕ್ಷೇತ್ರ ಗ್ಯಾರಂಟಿ ಸಮಿತಿ ಸದಸ್ಯ ಬಸವರಾಜ ತಳವಾರ ಅಭಿಪ್ರಾಯಪಟ್ಟರು.

ಸಮೀಪದ ಅಬ್ಬಿಗೇರಿ ಕಾಂಗ್ರೆಸ್ ಕಮಿಟಿ ವತಿಯಿಂದ ರಾಜ್ಯ ಉಪಚುನಾವಣೆ ವಿಜಯೋತ್ಸವದಲ್ಲಿ ಅವರು ಮಾತನಾಡಿದರು.

ಮಾಜಿ ಗ್ರಾಪಂ ಸದಸ್ಯರಾದ ಭೀಮಶಿ ಮಲ್ಲಾಪೂರ ಮಾತನಾಡಿ, ಸರ್ಕಾರವನ್ನು ಅತಂತ್ರಗೊಳಿಸಬೇಕೆಂದು ವಿರೋಧ ಪಕ್ಷ ಬಿಜೆಪಿ, ಕೇಂದ್ರ ಸರ್ಕಾರದ ಬೆಂಬಲ ಪಡೆದು ನಿರಂತರವಾಗಿ ಪ್ರಯತ್ನ ನಡೆಸುತ್ತಿತ್ತು. ಇದು ಸರಿ ಅಲ್ಲ ಎಂದು ಜನರು ತೀರ್ಪು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ತೀರ್ಪು ಅಂತಿಮ. ಬಹುಮತದ ಸರ್ಕಾರವನ್ನು ಅತಂತ್ರಗೊಳಿಸಿ ಅಧಿಕಾರ ಹಿಡಿಯುವ ಬಿಜೆಪಿಯ ಅಧಿಕಾರ ದಾಹಕ್ಕೆ ಈ ತೀರ್ಪು ಪೂರ್ಣ ವಿರಾಮ ನೀಡಿದೆ ಎಂದರು.

ಬಾಬುಗೌಡ ಪಾಟೀಲ, ಶಂಭು ಮಾಳಶೆಟ್ಟಿ, ಸುರೇಶ ಬಸವರಡ್ಡೇರ, ಬಸವರಾಜ ಪಲ್ಲೇದ, ಎ.ವಿ. ವೀರಾಪೂರ, ಮಂಜು ಅಂಗಡಿ, ಎಂ.ಎಸ್. ಕಂಬಳಿ, ಎಚ್.ಟಿ. ದ್ವಾಸಲ, ಶಿವಪುತ್ರ ಕೆಂಗಾರ, ಮಂಜು ಚಿತ್ತರಗಿ, ಚನಬಸು ಹೂಗಾರ, ನಾಗಪ್ಪ ಗುಗ್ಗರಿ, ಬಾಬು ಬನ್ನಿಕೊಪ್ಪ, ಪ್ರವೀಣ ಮಳಗಿ, ಸಾಧಿಕ್ ತಹಶೀಲ್ದಾರ, ಬಸವರಾಜ ಇಟಗಿ, ರಾಮಣ್ಣ ಕುಲಕರ್ಣಿ, ಆನಂದ ಹಿರೇಮನಿ, ಲಕ್ಷ್ಮ್ಮ ಹಿರೇಮನಿ, ಸೋಮು ಶಿರೋಳ, ಕುಮಾರ ಬಸವರಡ್ಡೇರ, ರಾಮನಗೌಡ ಹಲಕುರ್ಕಿ, ಭೀಮಣ್ಣ ಚಿಕ್ಕೇನಕೊಪ್ಪ, ಶಿವಣ್ಣ ಗುಗ್ಗರಿ, ತಿಮ್ಮರಡ್ಡಿ ಇಮ್ರಾಪೂರ, ಅಂದಪ್ಪ ಹಲಕುರ್ಕಿ, ಶರಣಪ್ಪ ಮಾದಿನೂರ, ನಿಂಗನಗೌಡ ಬೂದಿಹಾಳ, ಅಂದಪ್ಪ ಅವರಡ್ಡಿ, ಮುತ್ತಪ್ಪ ರೋಣದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net