ನೊಣವಿನಕೆರೆ: ತಿಪಟೂರು ತಾಲೂಕು ನೊಣವಿನಕೆರೆಯಲ್ಲಿ ಸರ್ಕಾರ ಲಕ್ಷಾಂತರ ಖರ್ಚು ಮಾಡಿ ಬಸ್ ನಿಲ್ದಾಣ ನಿಮಾರ್ಣ ಮಾಡಿದರೂ ನಿಲ್ದಾಣದೊಳಗೆ ಬಸ್ಗಳು ತೆರಳದೆ ನಿಲ್ದಾಣದ ಮುಂಭಾಗದ ವೈ.ಟಿ.ರಸ್ತೆಯಲ್ಲಿ ನಿಲ್ಲಿಸುತ್ತಿರುವುದರಿಂದ ರಸ್ತೆಯಲ್ಲಿ ಬಸ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ನೊಣವಿನಕೆರೆ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದ್ದು, ಸುತ್ತಮುತ್ತಲ 30ಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ತುರುವೇಕೆರೆ ಮಾರ್ಗವಾಗಿ ಬೆಂಗಳೂರು, ಮೈಸೂರು ಮತ್ತು ತಿಪಟೂರು ಮಾರ್ಗವಾಗಿ ಶಿವಮೊಗ್ಗ, ಹಾಸನಕ್ಕೆ ತೆರಳುತ್ತಾರೆ. ಈ ಊರುಗಳಿಗೆ ಸಂಚರಿಸುವ ಬಸ್ಗಳು ಬಸ್ ನಿಲ್ದಾಣದ ಒಳಗೆ ಬಾರದ ಕಾರಣ ಜನರು ಬಿಸಿಲು, ಮಳೆ ಎನ್ನದೆ ರಸ್ತೆಯಲ್ಲಿ ಕಾಯುವಂತಾಗಿದೆ.
ಬಸ್ ನಿಲ್ದಾಣವನ್ನು 2011ರಲ್ಲಿ ನಿರ್ಮಾಣ ಮಾಡಲಾಗಿದೆ. ಹೀಗೆ ನಿರ್ಮಾಣವಾದ ನಿಲ್ದಾಣ ಕೆಲವು ವರ್ಷಗಳಲ್ಲೇ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ತಡೆನಡೆಸಿದಾಗ ಅಧಿಕಾರಿಗಳು ಸ್ಪಂದಿಸಿ ನಿಲ್ದಾಣದ ನಿರ್ವಹಣೆ ಹಾಗೂ ಸಂಚಾರ ನಿಯಂತ್ರಕರ ನಿಯೋಜನೆ ಮಾಡಿ ಬಸ್ಗಳು ನಿಲ್ದಾಣದ ಒಳಗೆ ಹೋಗಿ ಬರುವುದು ವ್ಯವಸ್ಥಿತವಾಗಿ ನಡೆಯುತ್ತಿತ್ತು. ಇತ್ತೀಚೆಗೆ ಕೆಲವು ತಿಂಗಳಿಂದ ಸಂಚಾರ ನಿಯಂತ್ರಕರ ನಿಯೋಜನೆ ಇಲ್ಲದ ಕಾರಣ ರಸ್ತೆಯಲ್ಲಿ ನಿಲ್ಲಿಸಿ ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದು ಸಮಸ್ಯೆಯಾಗಿದೆ.
ಬೆಳಗ್ಗೆ ವಿದ್ಯಾರ್ಥಿಗಳು, ನೌಕರರು ಕಾಯುತ್ತಿದ್ದರು ಕೆಲವು ಬಸ್ಗಳು ನಿಲ್ಲಿಸದೆ ಹೋಗುವುದು ನಿತ್ಯ ನಡೆಯುತ್ತಿವೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಸ್ ತಡೆದು ಚಾಲಕ ಮತ್ತು ನಿರ್ವಾಕರನ್ನು ಕೇಳಿದರೆ ಉಡಾೆ ಉತ್ತರ ನೀಡುತ್ತಾರೆ. ನಿಲ್ದಾಣದಲ್ಲಿ ವೃದ್ಧರು, ರೋಗಿಗಳು, ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಕಾಯ್ದು ಕುಳಿತಿದ್ದರು ಒಳಗಡೆ ಬಾರದೆ ಹೋಗುವುದರಿಂದ ತೊದರೆಯಾಗಿದೆ. ವೈ.ಟಿ.ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ರಸ್ತೆದಾಟುವಾಗ ಅಪಘಾತಗಳು ಸಂಭವಿಸುತ್ತಿವೆ. ಸರ್ಕಾರ ನಿಲ್ದಾಣದಲ್ಲಿ ಒಬ್ಬ ಸಂಚಾರ ನಿಯಂತ್ರಕನ ನಿಯೋಜನೆ ಮಾಡಬೇಕು ಮತ್ತು ನಿಲ್ದಾಣದೊಳಗೆ ಬಸ್ ಬರುವಂತೆ
ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನೊಣವಿನಕೆರೆ ಪ್ರಮುಖ ನಗರ ಪ್ರದೇಶಕ್ಕೆ ಸಂಪರ್ಕ ಕಲ್ಪಸುವ ಸ್ಥಳವಾಗಿದೆ. ಬಸ್ಗಳು ನಿಲ್ದಾಣದೊಳಗೆ ಬಾರದೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ವೃದ್ಧರು, ರೋಗಿಗಳು ಬಸ್ ಹತ್ತಲು ಕಷ್ಟ ಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕು. - ಶಂಕರ್ ಗುರು ನೊಣವಿನಕೆರೆ ಸ್ಥಳಿಯ ವಾಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದ್ದು, ಸಂಚಾರ ನಿಯಂತ್ರಕರ ನಿಯೋಜನೆ ಬಗ್ಗೆ ಸ್ಥಳಿಯ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಶೀಘ್ರದಲ್ಲೆ ಉತ್ತಮ ಸಂಚಾರ ವ್ಯವಸ್ಥೆ ಕಲ್ಪಸಲಾಗುವುದು. - ಮಂಜುನಾಥ್ ಡಿಟಿಒ ಕ.ರಾ.ರ.ಸಾ. ಸಂಸ್ಥೆ, ತುಮಕೂರು ಸರ್ಕಾರ ಲಾಂತರ ಖರ್ಚು ಮಾಡಿ ಉತ್ತಮ ಬಸ್ ನಿಲ್ದಾಣ ನಿರ್ಮಿಸಿದರೂ ನಿಲ್ದಾಣದೊಳಗೆ ಬಸ್ ಬಾರದೆ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಿರುವುದರ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಚಾರ ನಿಯಂತ್ರಕರನ್ನು ನಿಯೋಜನೆ ಮಾಡಿ ಸಮಸ್ಯೆ ಬಗೆಹರಿಸಬೇಕು. - ಚಂದ್ರೇಗೌಡ ಕಸವನಹಳ್ಳಿ ನಿವಾಸಿ