

ಕಡೂರು: ಪಟ್ಟಣದ ಯು.ಬಿ.ರಸ್ತೆಯ ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ ಸಾರಿಗೆ ಬಸ್ ಚಾಲಕನ ಅಜಾಗುರುಕ ಚಾಲನೆಯಿಂದ ಬಸ್ ಡಿವೈಡರ್ ಮೇಲಿನ ಎರಡು ವಿದ್ಯುತ್ ಕಂಬಗಳಿಗೆ ಗುದ್ದಿದೆ.
ಬೆಳಗ್ಗೆ 6 ಗಂಟೆ ವೇಳೆಗೆ ಪಟ್ಟಣದ ಚೆಕ್‌ಪೋಸ್ಟ್ ಸಮೀಪದ ಯು.ಬಿ. ರಸ್ತೆಯಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಬಸ್‌ನಿಲ್ದಾಣಕ್ಕೆ ಹೋಗುವ ಯು.ಬಿ.ರಸ್ತೆಯ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗಳಿಗೆ ಅಳವಡಿಸಿದ್ದ ವಿದ್ಯುತ್ ಕಂಬಗಳಿಗೆ ಏಕಾಏಕಿ ಗುದ್ದಿದೆ. ಬಸ್ ಗುದ್ದಿದ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕಂಬವು ಉರುಳುವ ವೇಳೆ ಸರ್ವಿಸ್ ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆಯೊಬ್ಬರು ಕೂದಲೆಳೇ ಅಂತರದಲ್ಲಿ ಪಾರಾಗಿದ್ದಾರೆ. ಬೆಳಗ್ಗಿನ ವೇಳೆಯಾಗಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ. ಸಾರಿಗೆ ಬಸ್‌ವಿದ್ಯುತ್ ಕಂಬಕ್ಕೆ ಗುದ್ದಿರುವ ವಿಡೀಯೋ ಸಾಕಷ್ಟು ವೈರಲ್ ಅಗಿದೆ.