ಚಕ್ಕಡಿ ಸಮೇತ ನೀರು ಕುಡಿಯಲು ತೆರಳಿದ್ದ ಎತ್ತುಗಳು ಕೆರೆಯಲ್ಲಿ ಮುಳುಗಿ ಸಾವು

OXE DEATH IN LAKE
Published on

ಬಂಕಾಪುರ: ಬಿಸಿಲಿನ ಬೇಗೆ ತಾಳಲಾರದೇ ದಾಹ ತಣಿಸಿಕೊಳ್ಳಲು ಚಕ್ಕಡಿ ಸಮೇತ ನೀರು ಕುಡಿಯಲು ಕೆರೆಗೆ ಹೋದ ಎರಡು ಎತ್ತುಗಳು ಕೆರೆಯ ಆಳದಲ್ಲಿ ಸಿಲುಕಿ ಹೊರಬರಲಾರದೇ ಮೃತಪಟ್ಟ ದಾರುಣ ಘಟನೆ ಸಮೀಪದ ಕುಂದೂರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಎತ್ತುಗಳು ಗುಡ್ಡದಚನ್ನಾಪುರ ಗ್ರಾಮದ ಗದಿಗೆಪ್ಪ ನಾಗಪ್ಪ ಆಲದಕಟ್ಟಿ ಅವರಿಗೆ ಸೇರಿದ್ದಾಗಿದೆ. ಗದಿಗೆಪ್ಪ ಅವರು ಮನೆಯ ಸಮೀಪವೇ ಎತ್ತುಗಳನ್ನು ಚಕ್ಕಡಿಗೆ ಕಟ್ಟಿ ಬೇರೆಡೆಗೆ ತೆರಳುವವರಿದ್ದರು. ಈ ವೇಳೆ ನೀರು ಕುಡಿಯಲು ಸ್ವಲ್ಪವೇ ದೂರದಲ್ಲಿದ್ದ ಕೆರೆಗೆ ಎತ್ತುಗಳು ಚಕ್ಕಡಿ ಸಮೇತ ತೆರಳಿವೆ. ಆದರೆ, ಕೆರೆಯಲ್ಲಿ ಹೂಳು ತುಂಬಿದ್ದರಿಂದ ಹಾಗೂ ಚಕ್ಕಡಿ ಸಮೇತ ಕೆರೆಗೆ ಇಳಿದಿದ್ದರಿಂದ ಎತ್ತುಗಳು ಹೊರಬರಲಾರದೆ ಅಸುನೀಗಿವೆ. ವಿಷಯ ತಿಳಿದ ಗ್ರಾಮಸ್ಥರು ಮೃತ ಎತ್ತುಗಳನ್ನು ಹೊರಗೆ ತಂದಿದ್ದಾರೆ.

ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net