

ವಿಜಯಪುರದ ಆಲಮೇಲ ನಿವಾಸಿ ಖಾಜೇಸಾಬ ಹುಸೇನಸಾಬ ಸೌದಾಗರ ಅವರು ಸಾಕಿದ್ದ ಧೂಳಿಯಾ ತಳಿ ಜಫರಧಾರಿ ಜಾತಿಯ ಎಮ್ಮೆ 5.10 ಲಕ್ಷ ರೂ.ಗೆ ಮಾರಾಟವಾಗಿದೆ.
ಮಹಾರಾಷ್ಟ್ರದ ಉದ್ಯಮಿ ಗಾವಡೆ ಎಮ್ಮೆ ಖರೀದಿಸಿದ್ದು, ವಾದ್ಯಮೇಳದೊಂದಿಗೆ ಭಾನುವಾರ ಎಮ್ಮೆಯನ್ನು ಮೆರವಣಿಗೆ ನಡೆಸಿ ಖಾಜೇಸಾಬ ಬೀಳ್ಕೊಟ್ಟರು. ಇವರು 3.15 ಲಕ್ಷ ರೂ.ಗೆ ಕಳೆದ ವರ್ಷ ಹೈದರಾಬಾದ್ದಲ್ಲಿ ಎಮ್ಮೆ ಖರೀದಿಸಿದ್ದರು. ನಿತ್ಯ ಬೆಳಗ್ಗೆ ಮತ್ತು ಸಂಜೆ ಒಟ್ಟು 20 ಲೀಟರ್ ಹಾಲು ಕೊಡುತ್ತದೆ.