ಕಾಟಾಚಾರಕ್ಕೆ ನಡೆದ ಬಜೆಟ್ ಪೂರ್ವಭಾವಿ ಸಭೆ

Sirwar Meet
ಸಿರವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಬಜೆಟ್ ಪೂರ್ವಭಾವಿ ಸಭೆ ನಡೆಯಿತು. ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಪ್ರಭಾರ ಮುಖ್ಯಾಧಿಕಾರಿ ಹಂಪಯ್ಯ ಪಾಟೀಲ್ ಇದ್ದರು.
Published on

ಸಿರವಾರ: ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ವೈ.ಭೂಪನಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಬಜೆಟ್ ಪೂರ್ವಭಾವಿ ಸಭೆ ಕಾಟಾಚಾರಕ್ಕೆ ಎಂಬಂತೆ ನಡೆಯಿತು.

ಸಭೆಗೆ 20 ಜನ ಸದಸ್ಯರಲ್ಲಿ ಕೇವಲ 10 ಜನರು ಹಾಜರಿರಾಗಿದ್ದರು. ಸಂಘ ಸಂಸ್ಥೆಗಳಿಗೆ ಮಾಹಿತಿ ಕೊರತೆಯಿದ ಹಲವು ಸಂಘಟನೆಯ ಸದಸ್ಯರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಪಟ್ಟಣದಲ್ಲಿ ಅವಶ್ಯಕತೆ ಇರುವ 2000 ವೈಯಕ್ತಿಕ, ಸಾರ್ವಜನಿಕ ಶೌಚಗೃಹ ನಿರ್ಮಾಣ, ಶಾಶ್ವತ ಕುಡಿವ ನೀರನ್ನು ಒದಗಿಸುವ ಯೋಜನೆ, ಕಸದ ತ್ಯಾಜ್ಯ ವಿಲೇವಾರಿ ಸ್ಥಳ ಸೇರಿದ ಅನೇಕ ವಿಷಯಗಳ ಚರ್ಚೆ ನಡೆದವು.

ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಪ್ರಭಾರ ಮುಖ್ಯಾಧಿಕಾರಿ ಹಂಪಯ್ಯ ಪಾಟೀಲ, ಸದಸ್ಯರಾದ ಸೂರಿ ದುರಗಣ್ಣ ನಾಯಕ, ಹಸೇನ್ ಅಲಿ ಸಾಬ್, ಸಂದೀಪ್ ಪಾಟೀಲ್, ಮೌಲಸಾಬ್ ವರ್ಚಸ್, ಮಾರ್ಕಪ್ಪ, ಹಾಜಿ ಚೌದ್ರಿ, ಮುಖಂಡರಾದ ಎನ್.ಉದಯಕುಮಾರ, ಬಸವರಾಜ ನಾಯಕ ಕಲ್ಲೂರು, ರಮೇಶ ಶೆಟ್ಟಿ, ವಿನಯ ಕುಮಾರ, ಮಲ್ಲಪ್ಪ ಕಜ್ಜಿ, ನಾಗರಾಜ, ವೆಂಕಟೇಶ ದೊರೆ, ಚಂದ್ರಶೇಖರ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net