

ತ್ಯಾಮಗೊಂಡ್ಲು: ಪ್ರಜಾಪ್ರಭುತ್ವದಲ್ಲಿ ಚುನಾವಣೆ ಒಂದು ಮಹತ್ತರ ಘಟ್ಟ. ಅದನ್ನು ಬಹಿಷ್ಕರಿಸಬಾರದು ಎಂದು ತಹಸೀಲ್ದಾರ್ ಎಂ. ಶ್ರೀನಿವಾಸ್ ತ್ಯಾಮಗೊಂಡ್ಲು ಜನತೆಯಲ್ಲಿ ಮನವಿ ಮಾಡಿದರು.
‘ಚುನಾವಣೆಗೆ ತ್ಯಾಮಗೊಂಡ್ಲು ಗ್ರಾಮಸ್ಥರ ಬಹಿಷ್ಕಾರ’ ಶೀರ್ಷಿಕೆಯಲ್ಲಿ ವಿಜಯವಾಣಿ ಡಿ.3ರಂದು ಪ್ರಕಟಿಸಿದ್ದ ವರದಿಗೆ ಸ್ಪಂದಿಸಿದ ಅಧಿಕಾರಿಗಳ ತಂಡ ತ್ಯಾಮಗೊಂಡ್ಲು ವಾಸವಿ ದೇವಾಲಯ ಸಭಾಂಗಣದಲ್ಲಿ ಶುಕ್ರವಾರ ಗ್ರಾಮಸ್ಥರ ಸಭೆ ನಡೆಸಿತು.
ಪಟ್ಟಣದ ಜನಸಂಖ್ಯೆ ಹೆಚ್ಚಾಗಿದ್ದು, ಗ್ರಾಪಂಗೆ ಸಿಗುತ್ತಿರುವ ಅನುದಾನ ಸಾಲುತ್ತಿಲ್ಲ. ಆರು ತಿಂಗಳಿನಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಿದೆ. ಪಟ್ಟಣ ಪಂಚಾಯಿತಿಯಾದರೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕುವ ಜತೆಗೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಮಂಡಿಸಿದರು.
ತಹಸೀಲ್ದಾರ್ ಎಂ. ಶ್ರೀನಿವಾಸ್ ಮಾತನಾಡಿ, ಗ್ರಾಮಸ್ಥರ ಒಕ್ಕೊರಲ ಬೇಡಿಕೆಯನ್ನು ಜಿಲ್ಲಾಧಿಕಾರಿಗೆ ತಿಳಿಸಲಾಗುವುದು, 2021 ರಲ್ಲಿ ಜನಗಣತಿ ನಡೆಯಲಿದ್ದು, ಪಟ್ಟಣ ಪಂಚಾಯಿತಿಯಾಗಿ ಘೋಷಿಸುವ ಎಲ್ಲ ಅರ್ಹತೆ ಸಿಗುತ್ತದೆ. ಆದ್ದರಿಂದ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಬಾರದು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯರು, ಗ್ರಾಪಂ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ತಾಪಂ ಮಾಜಿ ಸದಸ್ಯರು, ವರ್ತಕರ ಸಂಘದ ಸದಸ್ಯರು, ಪಟ್ಟಣದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಡೇರಿಯ ಮಾಜಿ ಅಧ್ಯಕ್ಷರು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಇದ್ದರು.
ಕಳೆದ ಗ್ರಾಪಂ ಚುನಾವಣೆಗೂ ಮುನ್ನವೇ ಪಪಂ ಆಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಗಲೂ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಡಿಸಿ ಭರವಸೆ ಮೇರೆಗೆ ಚುನಾವಣೆಯಲ್ಲಿ ಭಾಗಿಯಾಗಿದ್ದೆವು. ಇದಾಗಿ 5 ವರ್ಷವಾದರೂ ಮೇಲ್ದರ್ಜೆಗೇರಿಸಲಾಗಿಲ್ಲ. ಈಗಲೂ ಅದೇ ಭರವಸೆ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಸಿ.ಎಲ್.ಜಗದೀಶ್ ಪ್ರಸಾದ್, ಗ್ರಾಪಂ ಮಾಜಿ ಸದಸ್ಯ ಇನ್ನು ಎರಡ್ಮೂರು ತಿಂಗಳಲ್ಲಿ ಜನಗಣತಿ ನಡೆಸಿ ಅದರ ಪ್ರಕಾರವಾಗಿ ಪಪಂ ೋಷಣೆಯಾದ ಮೇಲೆ ಎಲ್ಲರೂ ಕಾನೂನಿನ ಪ್ರಕಾರವಾಗಿ ಚುನಾವಣೆಗೆ ಸ್ಪರ್ಧಿಸುತ್ತೇವೆ. ನಮ್ಮ ಬೇಡಿಕೆಯನ್ನು ಜಿಲ್ಲಾಡಳಿತಕ್ಕೆ ತಿಳಿಸಿ, ಆದಷ್ಟು ಬೇಗ ಗ್ರಾಪಂ ಅನ್ನು ಪಪಂ ಆಗಿ ಮೇಲ್ದರ್ಜೆಗೇರಿಸಲು ಅನುವು ಮಾಡಿಕೊಡಿ. ಟಿ.ಎನ್. ಹನುಮಂತರಾಜು, ಗ್ರಾಪಂ ಮಾಜಿ ಅಧ್ಯಕ್ಷ ಪಟ್ಟಣದ ಬಾಹ್ಯ ಸುತ್ತಳತೆ ನೋಡಿದಾಗ ಇದು ಪಪಂ ಎಂಬ ಭಾವನೆ ಮೂಡುತ್ತದೆ. 2016ರಲ್ಲಿ ಸಲ್ಲಿಸಿರುವ ಪ್ರಸ್ತಾವನೆಗೆ 2011ರ ಜನಗಣತಿ ಆಧಾರವಾಗಿದೆ. ಈಗಿನ ಜನಗಣತಿ ಪರಿಗಣಿಸಿದರೆ ಪಪಂಗೆ ಮೇಲ್ದರ್ಜೆಗೇರುವ ಎಲ್ಲ ಅರ್ಹತೆ ತ್ಯಾಮಗೊಂಡ್ಲು ಗ್ರಾಪಂಗೆ ಇದೆ. ಸದ್ಯ ನಿಗದಿಯಾಗಿರುವ ಗ್ರಾಪಂ ಚುನಾವಣೆ ಬಹಿಷ್ಕರಿಸದೆ ಸಹಕರಿಸಿ. ಪಪಂ ಆದಾಗ ಮುಂದೆ ಆ ಚುನಾವಣೆಗೂ ಸ್ಪರ್ಧಿಸಬಹುದು. ಜಗದೀಶ್, ಡಿವೈಎಸ್‌ಪಿ