ಎಮ್ಮೆ ಮೈ ತೊಳೆಯಲು ಹೋದ ಬಾಲಕ ಸಾವು

Crime Logo
Published on

ರಟ್ಟಿಹಳ್ಳಿ: ಎಮ್ಮೆ ಮೈ ತೊಳೆಯಲು ಹೋದ ಬಾಲಕನೊಬ್ಬ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮುತ್ತೇಶ ಮಂಜಪ್ಪ ಆಡಿನವರ (16) ಮೃತ ಬಾಲಕ.

ಈತ ಎಮ್ಮೆ ಮೈ ತೊಳೆಯುವ ಸಲುವಾಗಿ ಬುಳ್ಳಾಪುರ-ಕಡೂರ ಸಮೀಪದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net