ಈಜಲು ಹೋದ ಬಾಲಕ ನಾಪತ್ತೆ

19 lxr 5
Published on

ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಅಗಸ್ತ್ಯ ತೀರ್ಥದ ಹೊಂಡಕ್ಕೆ ಈಜಲು ಹೋದ ಬಾಲಕನೊಬ್ಬ ನಾಪತ್ತೆಯಾದ ಘಟನೆ ಗುರುವಾರ ಜರುಗಿದೆ. ಹರ್ಷ ದುರ್ಗಪ್ಪ ಅರಕೇರಿ (16) ಈಜಲು ಹೋಗಿ ನಾಪತ್ತೆಯಾದ ಬಾಲಕ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಈತ ಹಬ್ಬಕ್ಕೆಂದು ತನ್ನ ಅಜ್ಜಿ, ಪಟ್ಟಣದ ಮಟನ್ ಮಾರ್ಕೆಟ್ ಹತ್ತಿರದ ಸರಸ್ವತೆಮ್ಮ ಕಲಘಟಗಿ ಅವರ ಮನೆಗೆ ಬಂದಿದ್ದ. ಗೆಳೆಯರೊಂದಿಗೆ ಈತ ಪಟ್ಟಣದ ಹೊರವಲಯದ ಅಗಸ್ತ್ಯೕರ್ಥದ ಹೊಂಡಕ್ಕೆ ಈಜಲು ಹೋದಾಗ ಈ ಘಟನೆ ನಡೆದಿದೆ. ಹೊಂಡದ ಹತ್ತಿರ ಈತ ಧರಿಸಿದ್ದ ಬಟ್ಟೆಗಳು ಸಿಕ್ಕಿದ್ದು, ಮನೆಯವರ ಆಕ್ರಂದನ ಮುಗಿಲುಮುಟ್ಟಿತ್ತು.

ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಬಾಲಕ ಪತ್ತೆಯಾಗಿಲ್ಲ. ಶುಕ್ರವಾರ ಶೋಧ ಕಾರ್ಯ ಮುಂದುವರೆಯಲಿದೆ ಎಂದು ಅಗ್ನಿಶಾಮಕ ಅಧಿಕಾರಿ ಎಸ್.ವೈ. ಪಾಟೀಲ ಮತ್ತು ಪಿಎಸ್​ಐ ಶಿವಕುಮಾರ ಲೋಹಾರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net