ಈಜಲು ಹೋದ ಬಾಲಕ ಸಾವು

crime
Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದ ಕಾವೇರಿ ನದಿಯಲ್ಲಿ ಶುಕ್ರವಾರ ಈಜಲು ತೆರಳಿದ್ದ ಬಾಲಕ ತನ್ನ ತಂದೆ ಎದುರೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮೈಸೂರಿನ ಗೌಸಿಯಾನಗರದ ವಸೀಮ್ ಅವರ ಮಗ ಸಾಧಿಕ್ (16) ಮೃತ ಬಾಲಕ. ವಸೀಮ್‌ಗೆ ನಾಲ್ಕು ಮಂದಿ ಮಕ್ಕಳಿದ್ದು, ಶುಕ್ರವಾರ ಕುಟುಂಬ ಸಮೇತ ತಾಲೂಕಿನ ಶಿವನ ಸಮುದ್ರದ ದರ್ಗಾಕ್ಕೆ ಬಂದಿದ್ದರು. ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿದ ಬಳಿಕ ಸಮೀಪದ ಕಾವೇರಿ ನದಿಗೆ ಹೋಗಿದ್ದಾರೆ. ಈ ವೇಳೆ ವಾಸಿಮ್ ಅವರ 2ನೇ ಮಗ ಸಾಧಿಕ್ ಈಜಲು ನೀರಿಗೆ ಇಳಿದು ಸ್ವಲ್ಪ ದೂರ ಹೋಗಿದ್ದಾನೆ. ಆದರೆ, ಈ ವೇಳೆ ವಾಪಸ್ ಬರಲು ಸಾಧ್ಯವಾಗದೆ ಮುಳುಗಿದ್ದಾನೆ. ಇದನು ಕಂಡ ವಾಸಿಮ್ ಆತನನ್ನು ನೀರಿನಿಂದ ಮೇಲಕ್ಕೆತ್ತಿದರು. ಕೂಡಲೇ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಸಾಧಿಕ್‌ನನ್ನು ಕರೆತಂದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net