

ನಾಪೋಕ್ಲು: ಈಜಲು ತೆರಳಿದ್ದ ಬಾಲಕ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಎಮ್ಮೆಮಾಡು ಗ್ರಾಮದ ಮಾಂದಲ್ ಎಂಬಲ್ಲಿ ಕಾವೇರಿ ನದಿಯಲ್ಲಿ ಶುಕ್ರವಾರ ಸ್ನಾನ ಮಾಡಲು ತೆರಳಿದ್ದ ಬಾಲಕರ ತಂಡದಲ್ಲಿದ್ದ ಪೊಟ್ಟಂಡ ಹನೀಫ್ ಅವರ ಮಗ ಉಬೈಸ್ (12) ಈಜಲು ಹೋಗಿ ಕಾಣೆಯಾಗಿದ್ದಾನೆ. ನದಿಯಲ್ಲಿ ನೀರಿನ ಅರಿವು ಅಧಿಕವಿರುವುದರಿಂದಾಗಿ ಅಲ್ಲಿಯ ಗ್ರಾಮಸ್ಥರಿಂದ ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ದಳದವರನ್ನು ಸ್ಥಳಕ್ಕೆ ಕರೆಸಲಾಯಿತು. ಶೋಧ ನಡೆಸಿದ ಸಿಬ್ಬಂದಿ ರಾತ್ರಿ ಆಗಿತ್ತಿದ್ದಂತೆ ಶೋಧ ಕಾರ್ಯ ಸ್ಥಗಿತಗೊಳಿಸಿ ಶನಿವಾರಕ್ಕೆ ಮುಂದೂಡಿದರು. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.