ಜಮೀನಿನಿಂದ ಮನೆಗೆ ಹೋದ ಬಾಲಕ ನಾಪತ್ತೆ

IMG_20241029_090711_653
Published on

ಸಾಲಿಗ್ರಾಮ: ತಂದೆ ತಾಯಿಯೊಡನೆ ಜಮೀನಿನ ಹತ್ತಿರ ಇದ್ದ ಮಗ ಮನೆಗೆ ಹೋಗಿ ಬರುತ್ತೇನೆ ಎಂದು ಹೋದವನು ಇತ್ತೀಚೆಗೆ ಕಾಣೆಯಾಗಿದ್ದಾನೆ.

ತಾಲೂಕಿನ ಗುಬ್ಬಲ್ಳಿ ಗ್ರಾಮದ ಜವರೇಗೌಡ-ಕಳಸಮ್ಮ ದಂಪತಿ ಪುತ್ರ ಮೋಹನ್‌ಕುಮಾರ್ ಕಾಣೆಯಾದವನು. ಅ.12ರಂದು ಜಮೀನಿನ ಹತ್ತಿರ ಇದ್ದವನು ಮನೆ ಹೋಗಿ ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ. ಎಲ್ಲ ಕಡೆ ಹುಡುಕಾಡಿದರೂ ಸಿಕ್ಕಿಲ್ಲ ಎಂದು ಪಾಲಕರು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

16 ವರ್ಷದ ಈತ ನೀಲಿ ಬಣ್ಣದ ಟಿ-ಶರ್ಟ್, ಕಪ್ಪು ನಿಕ್ಕರ್, ಬಿಳಿ ಟವೆಲ್ ಧರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಮೊ: 9004996236/6366011827 ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net