

ಚಿತ್ರದುರ್ಗ: ಶಿವಸೇನೆಯ ಕೆಲಸವಿಲ್ಲದ ಕೆಲ ಅವಕಾಶವಾದಿ ರಾಜಕಾರಣಿಗಳಿಂದಾಗಿ ಗಡಿ ಸಮಸ್ಯೆ ಗರಿಗೆದರುತ್ತಿದೆ ಎಂದು ಸಾಹಿತಿ ಕುಂ.ವೀರಭ ದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರದ ಕೆಲವು ಪುಂಡರಿಂದಾಗಿ ಉದ್ಭವಿಸುತ್ತಿರುವ ಗಡಿ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಮಹಾರಾಷ್ಟ್ರ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಗಡಿಭಾಗಗಳಲ್ಲಿರುವ ಸಮಸ್ಯೆಗಳಿಗೆ ಅಂತಿಮ ಪರಿಹಾರವನ್ನು ಕಂಡುಕೊಳ್ಳಬೇಕಾದರೆ ಮಹಾಜನ್ ಸಮಿತಿ ವರದಿ ಜಾರಿಯಾಗಬೇಕು. ಕನಿಷ್ಠ ನೂರು ಕೋಟಿ ರೂ. ಮೀಸಲಿಟ್ಟು, ಗಡಿಭಾಗದ ಎಲ್ಲ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಗಡಿ ಕನ್ನಡಿಗರನ್ನು ಅನ್ಯರಾಜ್ಯದವರೆಂದು ಭಾವಿಸದೆ ಉದ್ಯೋಗದಲ್ಲೂ ಮೀಸಲು ನೀಡಬೇಕು.
ರಾಜ್ಯದ ಅನೇಕ ಸಮಸ್ಯೆಗಳಿಗೆ ಕನ್ನಡ ಪರ ಸಂಘಟನೆಗಳು ಸ್ಪಂದಿಸುತ್ತಿವೆ. ಆದರೆ ಸರ್ಕಾರ ಈ ಹೋರಾಟಗಾರರ ವಿರುದ್ಧವೇ ಎಫ್ ಐಆರ್ ದಾಖಲಿಸುತ್ತಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಗೆ ಅಸಮ್ಮತಿ ಸೂಚಿಸಿ ದ್ದರು. ಆದರೆ ಭಾಷೆಗಳನ್ನು ಆಧರಿಸಿದ ರಾಜ್ಯಗಳಿವೆ. ರಾಜ್ಯದ ನೆಲ, ಜಲ, ಭಾಷೆ ಬಗ್ಗೆ ರಾಜ್ಯದ ಜನರಲ್ಲಿ ಅಭಿಮಾನವಿರಬೇಕು, ಗಡಿಗಳ ಲ್ಲಿರುವ ಸಮಸ್ಯೆ ಎಂದು ಕನ್ನಡಿಗರು ಮೌನ ವಹಿಸಬಾರದು. ವೋಟ್ ಬ್ಯಾಂಕ್‌ಗಾಗಿ ಎಲ್ಲ ಪಕ್ಷಗಳು ಗಡಿ ಸಮಸ್ಯೆಯನ್ನು ಬಗೆಹರಿಸಲು ಆಸಕ್ತಿ ವಹಿಸುತ್ತಿಲ್ಲವೆಂದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಹಬ್ಬ, ಸಾಂಸ್ಕೃತಿಕ-ಸನ್ಮಾನ ಸಮಾರಂಭವನ್ನು ಮಳೆ ಕಾರಣದಿಂದಾಗಿ ಮುಂದೂಡಲಾಗಿದೆ ಎಂದರು. ಸಚ್ಚಿದಾನಂದ,ವಿಜಯಕುಮಾರ್,ವೀಣಾ ಗೌರಣ್ಣ, ಕುಮಾರ್, ಅವಿನಾಶ್, ನಾಗರಾಜ್ ಇದ್ದರು.
-----
(ಸಿಟಿಡಿ 11 ಕುಂವೀ)ಮಗ್‌ಶಾಟ್.