ಚುಂಬಕ ಗಾಳಿ ಪುಸ್ತಕ ಬಿಡುಗಡೆ ನಾಡಿದ್ದು

ಪ್ರಭುದೇವ ಕಪ್ಪಗಲ್ಲು
ಪ್ರಭುದೇವ ಕಪ್ಪಗಲ್ಲು
Published on

ಬಳ್ಳಾರಿ: ಪಟ್ಟಣದ ರಾಘವ ಕಲಾಮಂದಿರದಲ್ಲಿ ಮೇ 4 ರಂದು ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಅವರ ಗುಣವಿಶೇಷ ಕೃತಿ ‘ಚುಂಬಕ ಗಾಳಿ’ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಡೂರಿನ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಶ್ರೀ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಲೇಖಕಿ ಸವಿತಾ ನಾಗಭೂಷಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಡಾ.ಚಿದಾನಂದ ಸಾಲಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಜಾಜಿ ದೇವೇಂದ್ರಪ್ಪ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಗಾಂಧಿಭವನದಲ್ಲಿರುವ ಗಾಂಧೀಜಿ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ರಾಘವ ಕಲಾಮಂದಿರದವರೆಗೆ ಗ್ರಂಥಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಜಿಲ್ಲೆಯ ಜನರಿಗಾಗಿ ಮರು ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಶಂಕರಬಂಡೆ ಯಲ್ಲನಗೌಡ, ಸಿಎ ಸಿದ್ದರಾಮೇಶ್ವರಗೌಡ, ಸಾಹಿತಿ ಗಂಗಾಧರ ಪತ್ತಾರ್, ವಕೀಲ ಎಚ್.ಎಂ.ಅಂಕಲಯ್ಯ, ಪತ್ರಕರ್ತರಾದ ಕೆ.ಎಂ.ಮಂಜುನಾಥ, ಶಶಿಧರ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net