ಕಾಳಿ ನದಿಗೆ ಹಾರಿದ್ದ ಮಹಿಳೆ ಶವ ಪತ್ತೆ

Crime Logo
Published on

ದಾಂಡೇಲಿ: ಇಲ್ಲಿಯ ಕುಳಗಿ ಸೇತುವೆ ಮೇಲಿಂದ ಗುರುವಾರ ಕಾಳಿ ನದಿಗೆ ಹಾರಿದ್ದ ಮಹಿಳೆಯ ಶವ ಶನಿವಾರ ಪತ್ತೆಯಾಗಿದೆ. ಗಾಂಧಿನಗರದ ನಿವಾಸಿ ರೇಖಾ ಶಿವಾನಂದ ಕಂಬಾರಗಣವಿ (41 ) ಎಂದು ಗುರುತಿಸಲಾಗಿದೆ. ಈ ಕುರಿತು ಪತಿ ಶಿವಾನಂದ ಕಂಬಾರಗಣವಿ ನಗರ ಠಾಣೆಯಲ್ಲಿ ಗುರುವಾರ ಪತ್ನಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

ಪತ್ನಿಯು ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು. ಶನಿವಾರ ಬೆಳಗ್ಗೆ ಕರಿಯಂಪಾಲಿ ಹತ್ತಿರ ಕಾಳಿ ನದಿಯಲ್ಲಿ ಮಹಿಳೆಯ ಮೃತ ದೇಹ ದೊರಕಿದೆ. ದಾಂಡೇಲಿ ತಹಸೀಲ್ದಾರ್, ಸಿಪಿಐ, ನಗರ ಮತ್ತು ಗ್ರಾಮೀಣ ಠಾಣೆಯ ಪಿಎಸ್​ಐಗಳು, ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು, ರಾಫ್ಟಿಂಗ್ ತಂಡದವರು ಶೋಧನಾ ಕಾರ್ಯದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net