ದೇಹಕ್ಕೆ ವಯಸ್ಸಾಗಿದೆ ಹೊರತು ಮನಸ್ಸಿಗಲ್ಲ

The body is old, not the mind.
ಹುನಗುಂದ ಪಟ್ಟಣದ ಗುರು ಭವನದಲ್ಲಿ ಆಯೋಜಿಸಿದ್ದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಹಿತವರ್ಧಕ ಸಂಘದ ರಜತ ಮಹೋತ್ಸವದ ಸಂಭ್ರಮ, 26ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ತಹಸೀಲ್ದಾರ್ ನಿಂಗಪ್ಪ ಬಿರಾದರ ಮಾತನಾಡಿದರು. ಸಂಘದ ಅಧ್ಯಕ್ಷ ಎ.ಕೆ.ಉಪನಾಳ, ಎಸ್.ಬಿ.ಐ ಬ್ಯಾಂಕ ಮ್ಯಾನೇಜರ ಮಹೇಶ್ವರ ರೆಡ್ಡಿ, ಶರಣ ಸಾಹಿತ್ಯ ಅಧ್ಯಕ್ಷ ಎಸ್.ಎನ್. ಹಾದಿಮನಿ ಇದ್ದಾರೆ.
Published on

ಹುನಗುಂದ: ನಿವೃತ್ತ ನೌಕರರ ದೇಹಕ್ಕೆ ಮಾತ್ರ ವಯಸ್ಸಾಗಿದೆಯೇ ಹೊರತು ಮನಸ್ಸಿಗಲ್ಲ ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದರ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಹಿತವರ್ಧಕ ಸಂಘದ ರಜತ ಮಹೋತ್ಸವದ ಸಂಭ್ರಮ, 26ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಹಿರಿಯ ಸದಸ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ನೌಕರರು ಯುವಕರಿಗೆ ಕಡಿಮೆ ಇಲ್ಲ ಎಂಬಂತೆ ಸಂಘವನ್ನು ಸಂಘಟಿಸಿದ್ದಾರೆ. ಈ ಕಾರ್ಯ ಇದೇ ರೀತಿ ಮುಂದುವರೆಯಲಿ. ಸಂಘದ ಸದಸ್ಯರು ದೀರ್ಘಾಯುಷ್ಯ ಹೊಂದಲಿ ಎಂದು ಶುಭ ಹಾರೈಸಿದರು.

ಎಂ.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಸಂಘವು 25 ವರ್ಷ ಪೂರೈಸಿ 26ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ತಾಲೂಕಿನಲ್ಲಿ 400ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದರು.

ಇಳಕಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರೊ.ಗಾಯತ್ರಿ ದಾದ್ಮಿ, ಹಿರಿಯ ನಾಗರಿಕರಿಗೆ ಹಣಕಾಸಿನ ಉಳಿತಾಯ ಕುರಿತು ಉಪನ್ಯಾಸ ನೀಡಿದರು. ಲೇಖಕಿ ಡಾ.ಲಲಿತಾ ಹೊಸಪ್ಯಾಟಿ, ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮಾತನಾಡಿದರು.

ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಮಹೇಶ್ವರ ರೆಡ್ಡಿ, ಶರಣ ಸಾಹಿತ್ಯ ಅಧ್ಯಕ್ಷ ಎಸ್.ಎನ್. ಹಾದಿಮನಿ, ಸಂಘದ ಅಧ್ಯಕ್ಷ ಎ.ಕೆ. ಉಪನಾಳ ಉಪಾಧ್ಯಕ್ಷ ಬಿ.ಎನ್. ನಾಗನಗೌಡರ, ಪ್ರಧಾನ ಕಾರ್ಯದರ್ಶಿ ಬಿ.ವೈ. ಕೊಡಗಾನೂರ, ನಾಗಪ್ಪ ಕರಂಡಿ, ಸಿ.ಎಸ್. ಅಂಗಡಿ, ಎಸ್.ಎಸ್. ಅಂಗಡಿ, ಡಿ.ಎಸ್. ಪೂಜಾರ, ಎಲ್.ಜಿ. ದಿವಟಗಿ, ಎಂ.ಬಿ. ಗಂಜೀಹಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net