

ತ್ಯಾಮಗೊಂಡ್ಲು: ಹಾಲು ಉತ್ಪಾದಕರಿದ್ದರೆ ಮಾತ್ರ ಡೇರಿ, ಬಮುಲ್, ಕೆಎಂಎಫ್ ಒಕ್ಕೂಟ ಎಲ್ಲವೂ. ಹೀಗಿರುವಾಗ ರೈತರ ಎರಡು ಬಿಲ್ ತಡೆ ಹಿಡಿದಿರುವುದು ಎಷ್ಟು ಸರಿ ಎಂದು ನೆಲಮಂಗಲ ಬಮುಲ್ ನಿರ್ದೇಶಕ ಬೈರೇಗೌಡ ಪ್ರಶ್ನಿಸಿದರು. ನೆಲಮಂಗಲ ತಾಲೂಕಿನ ವಾದಕುಂಟೆ ಹಾಲು ಉತ್ಪಾದಕರ ಸಹಕಾರ ಸಂದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಹಾಲು ಉತ್ಪಾದಕಿ ಅಶ್ವಿನಿ ಮಾತನಾಡಿ, ಕಷ್ಟಪಟ್ಟು ಪಶುಪಾಲನೆ ಮಾಡಿ ಡೇರಿಗೆ ಹಾಲು ಹಾಕುತ್ತೇವೆ, ವರ್ಷದ ಕೊನೆಯಲ್ಲಿ ಬೋನಸ್ ನಿರೀೆಯಲ್ಲಿರುವ ನಮಗೆ ವಕೀಲರ ಶುಲ್ಕ ಕಟ್ಟಿ ಸಂ ನಷ್ಟದಲ್ಲಿದೆ ಎಂದು ಹೇಳುತ್ತಾರೆ. ನಮ್ಮ ಕಷ್ಟದ ಹಣ ಹೀಗೆ ವ್ಯರ್ಥವಾಗುತ್ತಿದೆ, ಇದಕ್ಕೆ ಪರಿಹಾರ ಕೊಡಿ ಎಂದು ಮನವಿ ಮಾಡಿದರು.
ರೈತ ಅಶ್ವಥಯ್ಯ ಮಾತನಾಡಿ, ಕೇವಲ ಒಬ್ಬರ ಅರ್ಜಿಯಿಂದ ರೈತರ ಬಿಲ್ ತಡೆಯುವ ಕೆಲಸವಾಗಿದೆ, ಹಿರಿಯ ಅಧಿಕಾರಿಗಳು ವಾಸ್ತವ ಅರಿತು ಕೆಲಸ ಮಾಡಿದರೆ ರೈತರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು. ರೈತ ಪುಟ್ಟರಾಜು ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಾಲ್ಕು ಬಾರಿ ಈ ರೀತಿ ಆಗಿದೆ ಪ್ರತಿಬಾರಿಯೂ ಇದರಿಂದ ರೈತರೇ ತೊಂದರೆಗೊಳಗಾಗುತ್ತಿದ್ದಾರೆ ಆದ್ದರಿಂದ ಇದಕ್ಕೆ ಒಂದು ಶಾಶ್ವತ ಪರಿಹಾರ ನೀಡಬೇಕೆಂದು ಬಮುಲ್ ನಿರ್ದೇಶಕರಿಗೆ ಮನವಿ ಮಾಡಿದರು. ಹಿರಿಯ ವಿಸ್ತರಣಾಧಿಕಾರಿ ಅಶೋಕ್, ವಿಸ್ತರಣಾಧಿಕಾರಿ ಚಿಕ್ಕಮಾರೇಗೌಡ, ಮುಖಂಡ ಗಂಗಾಧರ್, ಬೋಜರಾಜು, ಪುಟ್ಟರಾಜು, ನಾಗರಾಜು, ಗ್ರಾಪಂ ಮಾಜಿ ಸದಸ್ಯೆ ಜಯಮ್ಮ, ಹಾಲು ಪರೀಕ್ಷಕಿ ಸರೋಜಮ್ಮ ಇದ್ದರು.
ಪುನರಾರಂಭಿಸಲು ಕ್ರಮದ ಭರವಸೆ : ಸಂದ ಸಿಇಒ ಆಗಿದ್ದ ರಮೇಶ್ ವಿರುದ್ಧ ಇನ್ನೂ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿರುವುದರಿಂದ ಸಹಕಾರ ಸಂಗಳ ಉಪನಿಬಂಧಕರಿಗೆ ಅದನ್ನು ಮನವರಿಕೆ ಮಾಡಿ ತಡೆಹಿಡಿದಿರುವ ಬ್ಯಾಂಕಿನ ವ್ಯವಹಾರ ಪುನರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಬಮುಲ್ ನಿರ್ದೇಶಕ ಬೈರೇಗೌಡ ಹೇಳಿದರು. ಹಸುಗಳಿಗೆ ಪೌಷ್ಟಿಕ ಮತ್ತು ಸಮತೋಲಿತ ಆಹಾರ ನೀಡಿದಾಗ ಗುಣಮಟ್ಟದ ಹಾಲು ಪಡೆಯಲು ಸಾಧ್ಯ, ರೈತರು ಇದನ್ನು ಅಳವಡಿಸಿಕೊಳ್ಳಬೇಕು, ರೈತರಿಗೆ ಅಗತ್ಯವಾಗಿ ಬೇಕಾಗಿರುವ ಮ್ಯಾಟ್, ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರಗಳನ್ನು ದೊರಕಿಸುತ್ತೇವೆ ಎಂದು ಹೇಳಿದರು.
ಪ್ರಕರಣವೇನು? : ಈ ಹಿಂದೆ ಸಂದ ಸಿಇಒ ಆಗಿದ್ದ ರಮೇಶ್ ಎಂಬಾತನನ್ನು ಈಗಿನ ಆಡಳಿತ ಮಂಡಳಿ ಹಣ ದುರ್ಬಳಕೆ ಮಾನದಂಡದಲ್ಲಿ ಕೆಲಸದಿಂದ ತೆಗೆದಿದೆ. ಅದನ್ನು ಪ್ರಶ್ನಿಸಿ ಆತ ಕೆಎಟಿ ಮೊರೆ ಹೋಗಿದ್ದು, ಅಲ್ಲಿ ತೀರ್ಪು ಆಡಳಿತ ಮಂಡಳಿ ಪರ ತೀರ್ಪು ಬಂದಿತ್ತು, ಕೆಲವು ದಿನ ಸುಮ್ಮನಿದ್ದ ಆತ ದೊಡ್ಡಬಳ್ಳಾಪುರ ಸಹಕಾರ ಸಂಗಳ ಸಹಾಯಕ ನಿಬಂಧಕರ ಕಚೇರಿಗೆ ದೂರು ನೀಡಿ ಬ್ಯಾಂಕಿನ ವ್ಯವಹಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಲ್ಲಿ ಸಫಲನಾಗಿದ್ದ.